ಯಾದ್(ನೆನಪಪರ್ವತ)ಗಿರಿ ವಿದಾಯ ಹೇಳಿ ಹೋಗುತ್ತಿದ್ದೇನೆ ನಾನು ನನ್ನೂರಿಗೆ ಇಂದು| ಹನ್ನೊಂದು ವರ್ಷಗಳ ಕಾಲ ನಿಮ್ಮ ಪ್ರೀತಿಯಲಿ ಮಿಂದು|| ಊರೂರು ಅಲಿವಾಗ ನೆಲೆಕೊಟ್ಟ ಊರು, ಕೊಟ್ಟಿತು ಇರಲೊಂದು ನೆಮ್ಮದಿಯ ಸೂರು ಬಿಟ್ಟು ಹೋಗೋಕೆ ಆಗ್ತಿಲ್ಲ ಮನಸ್ಸಿಗೆ ಬೇಜಾರು ಒಂದಿನವೂ ನೆನೆಯದಂತೆ ಇರಿಸಿತು ತವರು. ಆಗಿಲ್ಲ ಕೊರತೆ ಇಲ್ಲಿ ಯಾವುದು ಒಂಚೂರು ಬೇಶ್ !.. ಎಂದು ಬೆನ್ನು ತಟ್ಟಿತು ಶಹಾಪುರ ಸೈ ಎಂದು ಮೈಗೆ ಹೊದಿಸಿತು ಶಾಲು-ಹಾರು. ಬಿರುದು ಬಾವಲಿ ಕೊಟ್ಟು ಹರಸಿತು ನೂರಾರು ಒಮ್ಮೆಯೂ ಮಾಡದೆ ತಂಟೆ ತಕರಾರು ವರ್ಗಾವಣೆ ಸುದ್ದಿ ಹಬ್ಬಿತು ಎಲ್ಲೆಡೆ ಪುಕಾರು ಕರೆಮಾಡಿ ವಿಚಾರಿಸಿದರು ಆಪ್ತರೆಲ್ಲರು "ಯಾಕೆ ಹೋಗುವೆ ಭೂತಿ" ಇಲ್ಯಾಕೆ ಬೇಜಾರು ಬಂದು ಬೀಡು ಸುಮ್ಮನೆ ಮಾಡದೆ ತಕರಾರು ಅಂದಾಗ ತುಂಬಿ ಬಂತು ಕಣ್ಣಾಲಿಗಳಲ್ಲಿ ನೀರು ಮನಸ್ಸು ಗಟ್ಟಿಮಾಡಿ ಕಳಚಿಕೊಂಡೆ ಕೊಂಡಿ ಶಹಾಪುರು ಕೈಲಿಡಿದು ಬಂದೆ ಖುಷಿಯಲಿ ಟ್ರಾನ್ಸ್ಫರ್ ಆರ್ಡರು ಕಾಂಪೌಂಡು ಒಳಬರುತಲಿ ತಲ್ಲಣಿಸತು ಹೃದಯ ಜೋರು ಮುಗ್ಧ ಮಕ್ಕಳು "ಸರ್" ಎಂದಾಗ ಕರಗಿ ನಿರಾಯಿತು ಕಣ್ಣೀರು ಮೂಕ ವಿಸ್ಮಿತನಾಗಿ ನಿಂತೆ ಏನು ಹೇಳಿದೆ ಒಂಚೂರು ನಾನೆಲ್ಲೂ ಹೋಗಲ್ಲ ಮಕ್ಕಳೇ ನಂದಿಲ್ಲೇ ಪಕ್ಕದೂರು ಆಗಾಗ ಬರುವೆ ಪಾಠ ಹೇಳಲು ಆಗದಿರಿ ನೀವು ಬೇಜಾರು ತಂದು ಕೊಟ್ಟಿದೆ ನನಗೆ ಯಾದಗಿರಿ ಸಾಕಷ್ಟು ಹೆಸರು ಮರೆಯುವುದಿಲ್ಲ ನಾನೆಂದಿಗೂ ಜೀವನದಲಿ ಇರುವರಿಗೂ ಉಸಿರು ಹೊತ್ತು ಸಾಗುತ್
Kitturu rani chennamma Residential School Almel