Thursday, October 14, 2021

 


SSLC Alternative  Programme Of Worke 2020-21

>>> Download Second Longuage English

>>> Download Second Longuage Hindi -1

>>> Download Second Longuage Hindi -2

>>> Download Second Longuage mathematics

>>> Download Second Longuage Science

>>> Download Second Longuage Social  Science


Monday, October 11, 2021

ಕೈಬೀಸಿ ಕರೆಯುತ್ತಿದೆ ಶಹಪೂರ ಚಾರಣ"

ಕೈಬೀಸಿ ಕರೆಯುತ್ತಿದೆ ಶಹಪೂರ ಚಾರಣ"

   ಹಚ್ಚ ಹಸಿರು ಹೂ-ಹಣ್ಣುಗಳ ತೋರಣ

   ಪ್ರಾಣಿ ಪಕ್ಷಿಗಳ ಕೂಗು ಇಂಪು ಕರಣ 

   ಕಣ್ಮನ ಸೆಳೆವ ಬೆಟ್ಟ ಗುಡ್ಡಗಳ ಚಾರಣ

   ರಾಜ ಮಾಹಾರಾಜರಾಳಿದ ಇತಿಹಾಸದ ಹುರಣ

   ಬಂದು ನೋಡೊಮ್ಮೆ ಇಲ್ಲಿ ಸ್ವರ್ಗವೇ ಅನಾವರಣ

   ಕಣ್ತುಂಬಿಕೊ ಕೋಟೆ ಕೊತ್ತಲಗಳ ಜೀವನ ಪಾವನ

            ದಿನಾ ಬೆಳಗ್ಗೆ ಎಂಟತ್ತು ಜನ ಶಿಕ್ಷಕರು ಸೇರಿ ಬೆಳಗಿನ ವಿಹಾರಕ್ಕೆ ಹೋಗುತ್ತಿದ್ದೆವು. ಎಂದಿನಂತೆ ನಿನ್ನೆ ಬೆಳಗ್ಗೆ ವಿಹಾರಕ್ಕೆ ಹೋದಾಗ. ನಾಳೆ ರವಿವಾರ ಎಲ್ಲಿಯಾದರೂ ಒಂದು ಕಡೆ ಪಿಕ್ನಿಕ್ ಹೋಗಲು ಯೋಚಿಸಿದೆವು. ಶಹಾಪುರ ಬೆಟ್ಟ ಹತ್ತಿ ಕೋಟೆ ನೋಡಿ, ಮೇಲಗಿರಿಪರ್ವತಕ್ಕೆ ಹೋಗಿ ಬರುವುದಾಗಿ ಹಿರಿಯ ಗೆಳೆಯರೊರ್ವರು ಹೇಳಿದ ಮಾತಿಗೆ ವಾಯುವಿಹಾರದ ಸದಸ್ಯರೆಲ್ಲರೂ ಸರಿಯೆಂದು ತಲೆಯಾಡಿಸಿ, ಊಟದ ವ್ಯವಸ್ಥೆಯ ಬಗ್ಗೆ ಯೋಚಿಸುತ್ತಿರುವಾಗಲೇ, ಅಲ್ಲಿಯೇ ಪಕ್ಕದಲ್ಲಿದ್ದ ಆರಕ್ಷಕರಾದ ಶಿವನಗೌಡರು ತಮ್ಮ ಕಿಸೆಯಿಂದ ಮೊಬೈಲ್ ತೆಗೆದು ಯಾರಿಗೋ ಕಾಲ ಮಾಡಿ. ನೂರು ರೊಟ್ಟಿ, ಮಸಾಲೆ ಅನ್ನ, ಅರ್ಧ ಕಿಲೋ ಶೇಂಗಾ ಹಿಂಡಿ, ಎರೆಡು ಮೂರು ತರಹದ ಬಾಜಿ, ಕಾಳು ಪಲ್ಯ, ದಾಲ ತಡಕಾ, ಶೇಂಗಾದ ಹೋಳಿಗೆ ಎರಡು ಲೀಟರ್ ಮೊಸರು. ಉಪ್ಪಿನಕಾಯಿ ಜೊತೆಗೆ ಹಸಿ ತರಕಾರಿ ಬಾಳೆಹಣ್ಣು ಹಾಗೂ ಬಳಸಿ ಬಿಸಾಡುವ ಊಟದ ತಟ್ಟೆಗಳು, ಪಾನ ಬೀಡಾ ಹಿಡಿದು ಕೈ ವರೆಸುವ ರದ್ದಿಯವರೆಗೆ ಎಲ್ಲಾ ಸಾಮಗ್ರಿಗಳನ್ನು ನಾಳಿನ ವ್ಯವಸ್ಥೆಗಾಗಿ ಒಂದೇ ಉಸಿರಿನಲ್ಲಿ ಪೋನನಲ್ಲೆ ಆರ್ಡರ ಮಾಡಿಯೆಬಿಟ್ಟರು. ಮೂಕಪ್ರೇಕ್ಷಕರಾಗಿ ನಾವೆಲ್ಲರೂ ಅವರ ಮುಖವನ್ನೇ ನೋಡುತ್ತಿದ್ದೆವು.

                ಅಷ್ಟರಲ್ಲಿ ಮತ್ತೆ ಅವರು ಸರ್ ನಾಳೆ ವ್ಯವಸ್ಥೆಗೆ ಇಷ್ಟು ಸಾಕಲ್ವ..? ಮತ್ತೇನಾದರೂ ಬೇಕಾ ಹೇಳಿ, ಎಲ್ಲ ವ್ಯವಸ್ಥೆ ಮಾಡೋಣ ಎಂದು ನಗುತ್ತಲೇ ಹೇಳಿದರು. ಮೊದಲೇ ಹೇಳಿ ಕೇಳಿ ಅವರು ಮೊದಲೇ ಆರಕ್ಷಕರು ನೋಡಿ, ಇವೆಲ್ಲವೂ ಅವರಿಗೆ ಹೊಸದೇನೂ ಅಲ್ಲ. ಅವರು ಕೆಲಸದ ಮೇಲೆ ಇದ್ದಾಗ ಅನಿವಾರ್ಯ ಸಂದರ್ಭದಲ್ಲಿ ಇಂಥ ಅದೆಷ್ಟು ಊಟಗಳನ್ನು ಆರ್ಡರ್ ಮಾಡಿರಬಹುದು ಎಂದು ಹಾಸ್ಯ ಮಾಡಿದೆ. ಎಲ್ಲರೂ ನಾಳಿನ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಾ ವಾಯುವಿಹಾರ ಮುಗಿಸಿ ಮನೆ ಕಡೆಗೆ ಹೊರಟೆವು. 

                 ನಾಳೆ ಬೆಳಗ್ಗೆ ಪರ್ವತಕ್ಕೆ ಹೋಗುವ ಯೋಚನೆಯಲ್ಲೆ ನಾನು ಬೇಗ ಮಲಗಿದೆ. ಬೆಳಗ್ಗೆ ಎದ್ದು, ವಿಹಾರಕ್ಕೆ ಹೋಗಲೆಂದು ಬಾಗಿಲು ತೆಗೆದಾಗ ಹೊರಗಡೆ ಜಿಟಿಜಿಟಿ ಮಳೆ ಸುರಿಯುತ್ತಿತ್ತು. ಛೇ...! ಇಂತಾ ಸಮಯದಲಲ್ಲೇ ಇದು ಬರಬೇಕೆ? ಎಂದುಕೊಂಡು ಒಳ ಬಂದೆ. ಅಷ್ಟರಲ್ಲಿಯೇ ಸ್ನೇಹಿತರೊಬ್ಬರು ಬೆಳಗಿನ ವಿಹಾರಕ್ಕೆ ಹೋಗುವುದು ಬೇಡ. ಮಳೆ ನಿಂತ ಮೇಲೆ ಶಹಾಪುರ ಬೆಟ್ಟಕ್ಕೆ ಹೋಗುವ ಯೋಚನೆ ಮಾಡೋಣವೆಂದು ಮೊಬೈಲನಲ್ಲಿ ಸಂದೇಶ ಹಾಕಿದ್ದರು. 

            ಬೆಟ್ಟ ಹತ್ತುವ ಖುಷಿಯಲ್ಲಿದ್ದ ನನಗೆ ಈ ತುಂತುರು ಮಳೆ ತಣ್ಣೀರೆರಚಿದಂತೆ ಅನಿಸಿತು. ಮತ್ತೆ ಸ್ವಲ್ಪ ಸಮಯ ಬಿಟ್ಟು ನಾನು ಪಾಟೀಲ ಸರ್ ಗೆ ಕರೆ ಮಾಡಿ, ಪರ್ವತಾರೋಹಣ ಮಾಡೋದಕ್ಕೆ ಇದೇ ಸರಿಯಾದ ಸಮಯ, ತುಂತುರು ಮಳೆಯಲ್ಲಿ ಪ್ರಕೃತಿಯ ಸೌಂದರ್ಯ ತುಂಬಾ ರಮಣೀಯವಾಗಿ ಕಾಣುವದು ಸರ್ ಎಂದೆ. ಅವರು ಕೂಡ ಅದೇ ಯೋಚನೆಯಲ್ಲಿದ್ದರು ಅನ್ಸುತ್ತೆ, ಆಯಿತು ಎಂದು, ಎಲ್ಲರಿಗೂ ತಿಳಿಸಲು ಹೇಳಿದರು. ನಾನು ತರಾತುರಿಯಲ್ಲಿ ತಯಾರಾಗಿ ಪಕ್ಕದ ಶಾಲೆಯ ಗೇಟ್ ಬಳಿ ಬಂದೆ. ಬರುವಷ್ಟರಲ್ಲಿ ಸ್ನೇಹಿತರೊಬ್ಬರ ಕಾರು ನನಗಾಗಿ ಕಾಯುತ್ತಾ ರಸ್ತೆಯ ಮೇಲೆ ನಿಂತಿತ್ತು. ನಾನು ಬರುವುದಷ್ಟೇ ತಡ ನನ್ನನ್ನು ಕೂಡಿಸಿಕೊಂಡು ಕಾರು ಶಹಾಪುರ ಬೆಟ್ಟದ ಕಡೆಗೆ ಹೊರಟೆ ಬಿಟ್ಟಿತು.

             ತಿರುವು-ಮುರುವು ಘಟ್ಟ ಪ್ರದೇಶದ ರಸ್ತೆಯಲ್ಲಿ ಬೆಟ್ಟದಿಂದ ಜುಳುಜುಳು ಹರಿಯುವ ನೀರಿನ ಸುಮಧುರ ನೀನಾದದಲ್ಲಿ ಜಿಟಿಜಿಟಿ ಮಳೆಗೆ ಶಹಾಪುರ ಬೆಟ್ಟ ಮಲೆನಾಡಿನ ಅನುಭವವೆ ನೀಡುತಿತ್ತು. ಬೆಟ್ಟ ಹತ್ತಿದ ನಮ್ಮ ಕಾರುಗಳನ್ನು ಸಿದ್ದಲಿಂಗೇಶ್ವರ ದೇವಸ್ಥಾನದ ಹತ್ತಿರ ನಿಲ್ಲಿಸಿ, ಎಲ್ಲರೂ ದರ್ಶನ ಪಡೆದು, ಒಟ್ಟು 15 ಜನರ ಸ್ನೇಹಿತರ ತಂಡ, ಬೆಟ್ಟ ಹತ್ತುವುದಕ್ಕೆ ಶುರುಮಾಡಿತು. 

            ದಾರಿ ಮಧ್ಯ ಮಧ್ಯೆ ಈ ಪೌರಾಣಿಕ ಕೋಟೆಕೊತ್ತಲಗಳ ಇತಿಹಾಸ ಕೆದಕುತ್ತಾ, ಏರು ಪೇರು ದಾರಿಯ ಕಲ್ಲು ಬಂಡೆಯ ಮೇಲೆ ಸಾಗತೊಡಗಿದೇವು. ಶಹಾಪುರ ಬೆಟ್ಟದ ಇತಿಹಾಸವೇ ರೋಚಕವಾಗಿದೆ. ಮಹಾಬಲಶಾಲಿಯಾಗಿದ್ದ ಸಗರ ಚಕ್ರವರ್ತಿ, ಈ ಕೋಟೆಯನ್ನು ಕಟ್ಟಿಸಿದ್ದನಂತೆ. ವಿಜಯನಗರದ ಅರಸರು ಇದಕ್ಕೊಂದು ಹೊಸ ರೂಪ ಕೊಟ್ಟರಂತೆ. ಮುಂದೆ ಮೊಗಲ್ ಚಕ್ರವರ್ತಿಯ ದಾಳಿಗೆ ತುತ್ತಾಯಿತಂತೆ, ಹೀಗೆ ಹಲವಾರು ವಿಚಾರಗಳು ಒಬ್ಬೊಬ್ಬರ ಬಾಯಿಂದ ಒಂದೊಂದು ರೀತಿಯ ವಿಚಾರ ಹೊರಬರತೊಡಗಿದವು. 

           ಶಿಥಿಲವಾಗಿ ಹಾಳುಬಿದ್ದ ಕೋಟೆಯನ್ನು ಮತ್ತೆ ವಿಜಯಪುರದ ಬಾದ್ಶಾಹನಿಂದ ಪುನರ್ನಿರ್ಮಿಸಲಾಯಿತು ಎಂದು ಮತ್ತೊಬ್ಬ ಸ್ನೇಹಿತ ಶಿಕ್ಷಕರು ಹೇಳಿದರು. ಕೋಟಿಯಲ್ಲಿ ಕಂಡುಬರುವ ಅನೇಕ ದೇವಸ್ಥಾನಗಳು ಮಹಾಭಾರತದ ಹೆಸರಿನ ಕೊಳಗಳು, ಬಾವಿ ಮತ್ತು ಸ್ಮಾರಕಗಳು, ಇತಿಹಾಸದ ಮಾಹಿತಿಗೆ ಹಿಡಿದ ಕನ್ನಡಿಯಂತಿವೆ. ಕೋಟಿ ಸಮೀಪಕ್ಕೆ ಹೋದಂತೆ ವಿಶಾಲ ಬಯಲು, ಮುರಿದುಬಿದ್ದ ಕೋಟೆಯ ಗೋಡೆಗಳು, ದೇವಸ್ಥಾನಗಳ ಸುಂದರ ದೃಶ್ಯ ಸೆರೆ ಹಿಡಿಯಲು ತುಂತುರು ಮಳೆಯಲ್ಲಿ ನಮ್ಮೆಲ್ಲರ ಮೊಬೈಲ್ ಕ್ಯಾಮೆರಾಗಳು ಕಾಯುತ್ತಿದ್ದವು. ಎಲ್ಲರೂ ಚಿಕ್ಕಮಕ್ಕಳಂತೆ ಕೂಗುತ್ತಾ, ಚಿರುತ್ತಾ, ನಕ್ಕು ನಲಿಯುತ್ತಾ. ಫೋಟೋ ಕ್ಲಿಕ್ಕಿಸಿಕೊಂಡು ಪಾಳು ಬಿದ್ದ ಕೋಟೆಕೊತ್ತಲಗಳ ಮೇಲೇರಿ ನಿಂತು, ವಿಹಂಗಮ ನೋಟದಲ್ಲಿ ಶಹಪುರ ಪಟ್ಟಣವನ್ನು ವೀಕ್ಷಿಸಿದೆವು. ಆ ಬೆಟ್ಟದ ತುದಿಯಲ್ಲಿ ವರ್ಷದಲ್ಲಿ ಮೂರು ಬಾರಿ. (ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯ ದಿನಾಚರಣೆ ಕರ್ನಾಟಕ ವಿಮೋಚನಾ ದಿನಾಚರಣೆಯಂದು), ಧ್ವಜಾರೋಹಣ ಮಾಡುವ ವಿಚಾರ ಶಿವನಗೌಡ್ರು ಹೇಳಿದ್ರು. ಆ ಎತ್ತರದ ಭಾಗದಲ್ಲಿ ಬೆಟ್ಟದ ಮೇಲೆ ಹತ್ತಿ ಎಲ್ಲರೂ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮ ಪಟ್ಟೆವು. ಅಷ್ಟೊತ್ತಿಗೆ ಮಳೆ ಕಡಿಮೆಯಾಗಿ ಪಳ್ಳನೆ ಬಿಸಿಲು ಬಿದ್ದಿತು ಮೈಗೇ ಸ್ವಲ್ಪ್ ಹಿತ ಅನಿಸಿತು. ಜಿಟಿಜಿಟಿ ಮಳೆಗೆ ತೊಯ್ದು ಪ್ರಕೃತಿ ಸೂರ್ಯನ ಕಿರಣಗಳಿಂದ ಕೋಟೆ ಮತ್ತಷ್ಟು ಕಣ್ಮನ ಸೆಳೆಯ ತೊಡಗಿತು. ಸೂರ್ಯನೆದುರಿಗೆ ಮೈಯೊಡ್ಡಿ ನಿಂತು ನಮ್ಮ ಫೋನ್ ಕ್ಯಾಮೆರಾಕ್ಕೆ ಹಬ್ಬವಾದೆವು. 

              ಬಹುಮನಿ ಅರಸರ ಕಾಲದಲ್ಲಿ ಸಗರಗಡ ಎಂದು ಎಂದು ಹೆಸರಾದ ಶಹಪುರ ಇಲ್ಲಿಗೆ ಸೆರೆಯಾಳುಗಳನ್ನು ತಂದು ಇಡುತ್ತಿದ್ದರಂತೆ. ಬಹುಮನಿ ಸಾಮ್ರಾಜ್ಯ ಒಡೆದು ಹೋದ ನಂತರ, ಈ ಕೋಟೆಯು ವಿಜಯಪುರ ಅರಸರ ಒಡೆತನಕ್ಕೆ ಸೇರಿತಂತೆ. ಕೃಷ್ಣದೇವರಾಯನು ಕೂಡ ಇಲ್ಲಿಗೆ ಬಂದು ಯುದ್ಧ ಮಾಡಿದ್ದನಂತೆ. ಇದಕ್ಕೆ ಅನೇಕ ಕುರುಹುಗಳಿವೆಯಂತೆ, ಹೀಗೆ ಒಬ್ಬರ ಬಾಯಿಂದ ಒದೊಂದು ಇತಿಹಾಸ ನೆನಪಿಸುತ್ತಾ. ತಾವರೆಕೆರೆಯ ಮಾರ್ಗವಾಗಿ ಮೇಲುಪರ್ವತದ ಕಡೆಗೆ ಹೊರಟೆವು.

                  ನೆಲಮಟ್ಟದಿಂದ 600 ಅಡಿ ಎತ್ತರದಲ್ಲಿರುವ ಈ ಕೋಟೆ ಸುಮಾರು 800 ವರ್ಷಗಳ ಇತಿಹಾಸ ಹೊಂದಿದೆ. ಇದು ಎಂಟು ಸುತ್ತಿನಕೋಟೆ ಹೊಂದಿದ್ದು. ಈ ಬೆಟ್ಟದಲ್ಲಿ ಚರಬಸವೇಶ್ವರ ಗದ್ದಿಗೆ ಸಿದ್ದಲಿಂಗೇಶ್ವರ ದೇವಸ್ಥಾನ, ಮೌನೇಶ್ವರ ಅನುಷ್ಠಾನ ಸ್ಥಳ, ಗವಿ ರಂಗನಾಥ ದೇವಸ್ಥಾನ, ಪಾಂಡವರ ಕಲ್ಲು, ಭೀಮನ ಗವಿ, ಡಿಗ್ಗಿ ಸಂಗಮನಾಥ ದೇವಸ್ಥಾನ. ಬುದ್ಧ ಮಲಗಿದ ದೃಶ್ಯ ಹೀಗೆ ಅನೇಕ ಪ್ರವಾಸ ತಾಣವಾಗಿದೆ. ಹೀಗೆ ಮಾತನಾಡುತ್ತಾ ಹೋಗುವಷ್ಟರಲ್ಲಿ ಮೇಲಗಿರಿ ಪರ್ವತ ಬಂದೇ ಬಿಟ್ಟಿತು. ದೇವರ ದರ್ಶನ ಪಡೆದ ನಂತರ ಪ್ರಸಾದ ಸ್ವೀಕರಿಸಿದಾಗ, ಬೆಳಗ್ಗೆಯಿಂದ ಟ್ರಕ್ಕಿಂಗ್ ಮಾಡಿ ಸುಸ್ತಾಗಿದ್ದ ನಮ್ಮ ದೇಹಕ್ಕೆ ಮರು ಜೀವ ಬಂದಂತಾಯ್ತು. ಸ್ವಲ್ಪ ಹೊತ್ತು ಅಲ್ಲಿಯೇ ಕುಳಿತು. ಲಿಂಗಗಳ ದರ್ಶನ ಮಾಡಿಕೊಂಡು ಮತ್ತೆ ಚರಬಸವೇಶ್ವರ ಗದ್ದೆಗೆ ಕಡೆಗೆ ವಾಪಸ ಬರತೊಡಗಿದವು. 

              ಇದುವರೆಗೂ ದೂರದಿಂದ ನೋಡಿದ ಶಹಾಪುರ ಕೋಟೆ ತನ್ನ ಉದರದಲ್ಲಿ ಎಷ್ಟೆಲ್ಲಾ ಕುತೂಹಲಕಾರಿ ಇತಿಹಾಸ, ವಿಸ್ಮಯ ಹಾಗೂ ಪ್ರಕೃತಿ ಸೌಂದರ್ಯವನ್ನು ತುಂಬಿಕೊಂಡಿದೆ ಅನಿಸಿತು. ಅಲ್ಲಿ ಇಲ್ಲಿ ಮುರಿದುಬಿದ್ದ ಕೋಟೆಗಳು, ಬೆಟ್ಟದಲ್ಲಿ ಹೂತುಹೋದ ತೋಪುಗಳು ಕಂಡು, ಇಂತಹ ಪುರಾತನವಾದ ಕೋಟಿಗೆ ಸರಕಾರದ ರಕ್ಷಣೆ ಅವಶ್ಯವಾಗಿದೆ, ಸರಕಾರದಿಂದ ಯಾವುದೇ ರಕ್ಷಣೆ ಇಲ್ಲದೆ ಹೋದರೆ ಅನೈತಿಕ ಚಟುವಟಿಕೆಗಳ ತಾಣವಾಗಬಹುದೆಂದು ತಿಳಿದು ಮನಸ್ಸು ಗಾಸಿಯಾಯಿತು. 

        

 ಪೂರ್ವಯೋಜಿತ ದಂತೆ ದಾರಿಯ ಮಧ್ಯದಲ್ಲಿ ಒಂದು ತಂಡ ಊಟದ ವ್ಯವಸ್ಥೆ ಮಾಡಿ. ನಾನಾ ಬಗೆಯ ತಿಂಡಿ ತಿನಿಸುಗಳನ್ನು ಇಟ್ಟು ನಮಗಾಗಿ ಸಿದ್ಧಪಡಿಸಿಕೊಂಡು ಕಾಯುತ್ತಿತ್ತು. ಕೈಕಾಲು ತೊಳೆದುಕೊಂಡು ವಿಶಾಲವಾದ ಬಂಡೆ ಮೇಲೆ ಊಟಕ್ಕೆ ಕುಳಿತೆವು. ನಾನಾ ಬಗೆಯ ಮೃಷ್ಟಾನ್ನ ಭೋಜನ ಪ್ರೀತಿಯಿಂದ ಬಡಿಸಿತು ಆ ತಂಡ. ಏನು ತಿನ್ನಲಿ, ಏನು ಬಿಡಲಿ, ಎನ್ನುವಷ್ಟು ಪದಾರ್ಥಗಳು ತಟ್ಟೆಯಲ್ಲಿ. ಮೊದ್ಲೇ ಬೆಟ್ಟದಲ್ಲಿ ತಿರುಗಾಡಿ ಸುಸ್ತಾದ ನಮಗೆ. ಏನು ತಟ್ಟೆಯಲ್ಲಿ ಉಳಿಯಲಿಲ್ಲ. ಮೇಲೆ ಪಾನ ಬೀಡ ಜಗಿದು, ಚಾರಣ ಕುರಿತು ಮೆಲಕು ಹಾಕುತ್ತಾ ನಮ್ಮ ಶಾಲೆಯ ಕ್ವಾಟರ್ಸ್ ಕಡೆಗೆ ಹೆಜ್ಜೆ ಹಾಕಿದೆವು.

***********************************

 ✍️ ಬಸವರಾಜ ಭೂತಿ. ಶಿಕ್ಷಕರು

ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಶಹಾಪುರ

ಮೋ. ನಂ. 9900804567

School Photos

 

ಬರದ ಬರೆ

  ಮೊನ್ನೆ ಶನಿವಾರ ಅರ್ಧ ದಿನದ ಶಾಲೆ ಮುಗಿಸಿ,  ಬಸ್ಸತ್ತಿ  ಊರ ಕಡೆಗೆ ಹೊರಟೆ. ನನ್ನೂರಿಗೆ ಹೋಗದೆಯು ತುಂಬಾ ದಿನಗಳಾಗಿತ್ತು. ಹೋಗುವ ದಾರಿ ಮಧ್ಯ ಮಧ್ಯದಲ್ಲಿ ಅಲ್ಲಲ್ಲಿ ಬ...