Sunday, November 14, 2021

ಇಂದು ನನ್ನ ಹುಟ್ಟಿದ ಹಬ್ಬ

 ಇಂದು ನನ್ನ ಹುಟ್ಟಿದ ಹಬ್ಬ



ಇಂಗ್ಲಿಷ್ ಕ್ಯಾಲೆಂಡರಿನ ಪ್ರಕಾರ ನನ್ನ ಜನ್ಮದಿನ. ಮುಖಪುಟಕ್ಕೆ ಬರುವುದಕ್ಕಿಂತ ಮುಂಚೆ ನನಗೂ ಒಂದು ಜನ್ಮ ದಿನವಿದೆ ಎಂಬುದೇ ಅರಿವಿರಲಿಲ್ಲ. ಎಂದೂ ಅದನು ಆಚರಿಸಿದನು ನಾನಲ್ಲ. ಆದರೆ ಇಂದು ಎಷ್ಟೋ ಜನ ಸ್ನೇಹಿತರು ಮುಖಪುಟದಲ್ಲಿ ನನಗೆ ಶುಭಾಶಯಗಳ ಸುರಿಮಳೆ ಗರೆದು ಅಭಿನಂದಿಸುತಿದ್ದಾರೆ. ಕೆಲ ಆತ್ಮೀಯರು ಜನ್ಮದಿನದ ಶುಭ ನುಡಿಗಳೊಂದಿಗೆ ನನ್ನ ಭಾವಚಿತ್ರಗಳನ್ನು ವಾಟ್ಸಪ್ ಅಂತಸ್ತಿಗೆ ಹಾಕಿ, ಶುಭ ಕೋರುತ್ತಿದ್ದಾರೆ. ಇದೆಲ್ಲ ನೋಡಿದರೆ, ಏನೋ ಒಂಥರಾ ಖುಷಿ, ಏನೋ ಒಂಥರಾ ಸಂತೋಷ ಮುಜುಗರ ಮನಸ್ಸಿಗೆ.

ಎಷ್ಟೊ.. ಸಲ ಅವ್ವನ ಬಳಿ ಹೋಗಿ ನಾನು ಹುಟ್ಟಿದ ದಿನದ ಬಗ್ಗೆ ಕೇಳಿದ್ದೆ. ಅದಕ್ಕವಳು "ಇಗಿನಾವರಂಗ ಶ್ಯಾಣತನ ಆವಾಗೆಲ್ಲಿ ನಮ್ಮಲ್ಲಿ ಇತ್ತಪ್ಪ, ಇಗ್ನವ್ರು ಬಡ್ಡ್ಯೆ ಅದು ಇದು ಅಂತ ಬರ್ದಿಟ್ಕೊಂಡು ಮಾಡ್ತಾರ. ಅಗ ಕಣ್ಣಿದ್ದು ಕುರ್ಡರು ನಾವು. ಇಗಿನವರಾದರ ಸಾಲಿ ಕಲ್ತಾರ, ಮಕ್ಳ ಹುಟ್ಟಾನ ದಿನಾ, ಟಾಯಮ್ಮ ಹಾಳ್ಯಾಗ ಬರ್ದಿಡ್ತಾರ. ಇದೆಲ್ಲ ಆಗ ನಮಗೆಲ್ಲಿ ಗೊತ್ತಿತ್ತಪ್ಪ. ನಮ್ ತವ್ರಮನಿಯವರು ಕುಬಸಾ ಮಾಡಾಕ ಬಂದಿದ್ದರು ಅವತ್ತೆ ನಾನು ಬ್ಯಾನಿ ತಿಂದು ಸರಕಾರ ದವಾಖಾನ್ಯಾಗ ನಿನ್ನ ಹಡದಿನಿ. ಅವತ್ತ ಅವ್ರ ಅತ್ತಿ ಮಗ್ಳ ಸಣ್ಣ್ ಹುಡ್ಗಿಗಿ ಜೊತಿ ಕುಂಡ್ರಸಿ ಕುಬಸಾ ನಿಮಪ್ಪಗ ಮಾಡ್ಯಾರ. ಅಂದ್ಳು, ಅವ್ಳ ಆ ಮುಗ್ದತೆ ಕಂಡು ನಗು ಕುಳಿತೆ. ಮತ್ತೆ ಮುಂದುವರೆದು ಹೇಳಿದಳು ಅವ್ವ.

 "ಮಗ ದೀವಳ್ಗಿ ಅಮಾಸಿ ಆಸ ಪಾಸನ್ಯಾಗ ಹುಟ್ಟಿದಿ, ನೀ ಹುಟ್ಟದಾಗ ಗಟ್ಟಿಗಿತ್ತಿ ಇಂದ್ರವ್ವ ದೇಶಾ ಆಳ್ತಿದಳು. ನಮ್ಮೂರ ಕುಲಕಾಣ್ಯಾರ ಮಗಾನು ಅವತ್ತೆ ಹುಟ್ಟಿದ್ದ ಅವ್ರೆನರ ಬರ್ದಿಟ್ಟಿರ ಬೇಕು. ಅಂದ್ಳು ನಮ್ಮವ್ವ. ಅಮಾವಾಸ್ಯೆ ಮತ್ತು ಹುಣ್ಣಿಮೆ ಲೆಕ್ಕ ಹಾಕಿ ದಿನಗಳಿಯೊ ಕಾಲದಾಗ ಅವ್ರರೆ ಎಲ್ಲಿಂದ ಬರ್ದಿಟ್ಟಾರು ನನ್ನ ಜನ್ಮ ದಿನವನ್ನ. ಎಂದು ಸುಮ್ಮನಾದೆ.

ನಮ್ಮ ಅಜ್ಜ ನನ್ನ ಕರಕೊಂಡು ಶಾಲೆಗೆ ದಾಖಲಿಸಲು ಹೊದಾಗ, ಹೆಡ್ ಮಾಸ್ತರು ಕರ್ದು, ಬೆನ್ನ ಹಿಂದಿಂದ ನನ್ನ ಕೈ ಕಿವಿಗೆ ತಾಗಿಸಲು ಹೇಳಿದರು. ಅವರು ಹೇಳಿದಂತೆ ನಾನು ನನ್ನ ಕೈಯನ್ನು ಬೆನ್ನ ಹಿಂದಿಂದ ಕಷ್ಟ ಪಟ್ಪು ತಂದು ಹಚ್ಚಿದ್ಯಾ. ಅಗ ಅವರು ನನ್ನ ಶಾಲೆಗೆ ದಾಖಲಿಸಿಕೊಂಡಿದ್ದರು. ಅವರೇ ನಾನಗೊಂದು ಜನ್ಮ ದಿನವನ್ನು ನೀಡಿದರು. ಅದುವೆ ಮುಂದೆ ಎಲ್ಲಾ ಪ್ರಮಾಣ ಪತ್ರಗಳಲ್ಲಿ ನಮೂದಾಯಿತು. ಅದೇ ನನ್ನ ಜನ್ಮ ದಿನವಾಗಿ ಆಚರಣೆಯು ನಡೆಯಿತು...


Thursday, October 14, 2021

 


SSLC Alternative  Programme Of Worke 2020-21

>>> Download Second Longuage English

>>> Download Second Longuage Hindi -1

>>> Download Second Longuage Hindi -2

>>> Download Second Longuage mathematics

>>> Download Second Longuage Science

>>> Download Second Longuage Social  Science


Monday, October 11, 2021

ಕೈಬೀಸಿ ಕರೆಯುತ್ತಿದೆ ಶಹಪೂರ ಚಾರಣ"

ಕೈಬೀಸಿ ಕರೆಯುತ್ತಿದೆ ಶಹಪೂರ ಚಾರಣ"

   ಹಚ್ಚ ಹಸಿರು ಹೂ-ಹಣ್ಣುಗಳ ತೋರಣ

   ಪ್ರಾಣಿ ಪಕ್ಷಿಗಳ ಕೂಗು ಇಂಪು ಕರಣ 

   ಕಣ್ಮನ ಸೆಳೆವ ಬೆಟ್ಟ ಗುಡ್ಡಗಳ ಚಾರಣ

   ರಾಜ ಮಾಹಾರಾಜರಾಳಿದ ಇತಿಹಾಸದ ಹುರಣ

   ಬಂದು ನೋಡೊಮ್ಮೆ ಇಲ್ಲಿ ಸ್ವರ್ಗವೇ ಅನಾವರಣ

   ಕಣ್ತುಂಬಿಕೊ ಕೋಟೆ ಕೊತ್ತಲಗಳ ಜೀವನ ಪಾವನ

            ದಿನಾ ಬೆಳಗ್ಗೆ ಎಂಟತ್ತು ಜನ ಶಿಕ್ಷಕರು ಸೇರಿ ಬೆಳಗಿನ ವಿಹಾರಕ್ಕೆ ಹೋಗುತ್ತಿದ್ದೆವು. ಎಂದಿನಂತೆ ನಿನ್ನೆ ಬೆಳಗ್ಗೆ ವಿಹಾರಕ್ಕೆ ಹೋದಾಗ. ನಾಳೆ ರವಿವಾರ ಎಲ್ಲಿಯಾದರೂ ಒಂದು ಕಡೆ ಪಿಕ್ನಿಕ್ ಹೋಗಲು ಯೋಚಿಸಿದೆವು. ಶಹಾಪುರ ಬೆಟ್ಟ ಹತ್ತಿ ಕೋಟೆ ನೋಡಿ, ಮೇಲಗಿರಿಪರ್ವತಕ್ಕೆ ಹೋಗಿ ಬರುವುದಾಗಿ ಹಿರಿಯ ಗೆಳೆಯರೊರ್ವರು ಹೇಳಿದ ಮಾತಿಗೆ ವಾಯುವಿಹಾರದ ಸದಸ್ಯರೆಲ್ಲರೂ ಸರಿಯೆಂದು ತಲೆಯಾಡಿಸಿ, ಊಟದ ವ್ಯವಸ್ಥೆಯ ಬಗ್ಗೆ ಯೋಚಿಸುತ್ತಿರುವಾಗಲೇ, ಅಲ್ಲಿಯೇ ಪಕ್ಕದಲ್ಲಿದ್ದ ಆರಕ್ಷಕರಾದ ಶಿವನಗೌಡರು ತಮ್ಮ ಕಿಸೆಯಿಂದ ಮೊಬೈಲ್ ತೆಗೆದು ಯಾರಿಗೋ ಕಾಲ ಮಾಡಿ. ನೂರು ರೊಟ್ಟಿ, ಮಸಾಲೆ ಅನ್ನ, ಅರ್ಧ ಕಿಲೋ ಶೇಂಗಾ ಹಿಂಡಿ, ಎರೆಡು ಮೂರು ತರಹದ ಬಾಜಿ, ಕಾಳು ಪಲ್ಯ, ದಾಲ ತಡಕಾ, ಶೇಂಗಾದ ಹೋಳಿಗೆ ಎರಡು ಲೀಟರ್ ಮೊಸರು. ಉಪ್ಪಿನಕಾಯಿ ಜೊತೆಗೆ ಹಸಿ ತರಕಾರಿ ಬಾಳೆಹಣ್ಣು ಹಾಗೂ ಬಳಸಿ ಬಿಸಾಡುವ ಊಟದ ತಟ್ಟೆಗಳು, ಪಾನ ಬೀಡಾ ಹಿಡಿದು ಕೈ ವರೆಸುವ ರದ್ದಿಯವರೆಗೆ ಎಲ್ಲಾ ಸಾಮಗ್ರಿಗಳನ್ನು ನಾಳಿನ ವ್ಯವಸ್ಥೆಗಾಗಿ ಒಂದೇ ಉಸಿರಿನಲ್ಲಿ ಪೋನನಲ್ಲೆ ಆರ್ಡರ ಮಾಡಿಯೆಬಿಟ್ಟರು. ಮೂಕಪ್ರೇಕ್ಷಕರಾಗಿ ನಾವೆಲ್ಲರೂ ಅವರ ಮುಖವನ್ನೇ ನೋಡುತ್ತಿದ್ದೆವು.

                ಅಷ್ಟರಲ್ಲಿ ಮತ್ತೆ ಅವರು ಸರ್ ನಾಳೆ ವ್ಯವಸ್ಥೆಗೆ ಇಷ್ಟು ಸಾಕಲ್ವ..? ಮತ್ತೇನಾದರೂ ಬೇಕಾ ಹೇಳಿ, ಎಲ್ಲ ವ್ಯವಸ್ಥೆ ಮಾಡೋಣ ಎಂದು ನಗುತ್ತಲೇ ಹೇಳಿದರು. ಮೊದಲೇ ಹೇಳಿ ಕೇಳಿ ಅವರು ಮೊದಲೇ ಆರಕ್ಷಕರು ನೋಡಿ, ಇವೆಲ್ಲವೂ ಅವರಿಗೆ ಹೊಸದೇನೂ ಅಲ್ಲ. ಅವರು ಕೆಲಸದ ಮೇಲೆ ಇದ್ದಾಗ ಅನಿವಾರ್ಯ ಸಂದರ್ಭದಲ್ಲಿ ಇಂಥ ಅದೆಷ್ಟು ಊಟಗಳನ್ನು ಆರ್ಡರ್ ಮಾಡಿರಬಹುದು ಎಂದು ಹಾಸ್ಯ ಮಾಡಿದೆ. ಎಲ್ಲರೂ ನಾಳಿನ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಾ ವಾಯುವಿಹಾರ ಮುಗಿಸಿ ಮನೆ ಕಡೆಗೆ ಹೊರಟೆವು. 

                 ನಾಳೆ ಬೆಳಗ್ಗೆ ಪರ್ವತಕ್ಕೆ ಹೋಗುವ ಯೋಚನೆಯಲ್ಲೆ ನಾನು ಬೇಗ ಮಲಗಿದೆ. ಬೆಳಗ್ಗೆ ಎದ್ದು, ವಿಹಾರಕ್ಕೆ ಹೋಗಲೆಂದು ಬಾಗಿಲು ತೆಗೆದಾಗ ಹೊರಗಡೆ ಜಿಟಿಜಿಟಿ ಮಳೆ ಸುರಿಯುತ್ತಿತ್ತು. ಛೇ...! ಇಂತಾ ಸಮಯದಲಲ್ಲೇ ಇದು ಬರಬೇಕೆ? ಎಂದುಕೊಂಡು ಒಳ ಬಂದೆ. ಅಷ್ಟರಲ್ಲಿಯೇ ಸ್ನೇಹಿತರೊಬ್ಬರು ಬೆಳಗಿನ ವಿಹಾರಕ್ಕೆ ಹೋಗುವುದು ಬೇಡ. ಮಳೆ ನಿಂತ ಮೇಲೆ ಶಹಾಪುರ ಬೆಟ್ಟಕ್ಕೆ ಹೋಗುವ ಯೋಚನೆ ಮಾಡೋಣವೆಂದು ಮೊಬೈಲನಲ್ಲಿ ಸಂದೇಶ ಹಾಕಿದ್ದರು. 

            ಬೆಟ್ಟ ಹತ್ತುವ ಖುಷಿಯಲ್ಲಿದ್ದ ನನಗೆ ಈ ತುಂತುರು ಮಳೆ ತಣ್ಣೀರೆರಚಿದಂತೆ ಅನಿಸಿತು. ಮತ್ತೆ ಸ್ವಲ್ಪ ಸಮಯ ಬಿಟ್ಟು ನಾನು ಪಾಟೀಲ ಸರ್ ಗೆ ಕರೆ ಮಾಡಿ, ಪರ್ವತಾರೋಹಣ ಮಾಡೋದಕ್ಕೆ ಇದೇ ಸರಿಯಾದ ಸಮಯ, ತುಂತುರು ಮಳೆಯಲ್ಲಿ ಪ್ರಕೃತಿಯ ಸೌಂದರ್ಯ ತುಂಬಾ ರಮಣೀಯವಾಗಿ ಕಾಣುವದು ಸರ್ ಎಂದೆ. ಅವರು ಕೂಡ ಅದೇ ಯೋಚನೆಯಲ್ಲಿದ್ದರು ಅನ್ಸುತ್ತೆ, ಆಯಿತು ಎಂದು, ಎಲ್ಲರಿಗೂ ತಿಳಿಸಲು ಹೇಳಿದರು. ನಾನು ತರಾತುರಿಯಲ್ಲಿ ತಯಾರಾಗಿ ಪಕ್ಕದ ಶಾಲೆಯ ಗೇಟ್ ಬಳಿ ಬಂದೆ. ಬರುವಷ್ಟರಲ್ಲಿ ಸ್ನೇಹಿತರೊಬ್ಬರ ಕಾರು ನನಗಾಗಿ ಕಾಯುತ್ತಾ ರಸ್ತೆಯ ಮೇಲೆ ನಿಂತಿತ್ತು. ನಾನು ಬರುವುದಷ್ಟೇ ತಡ ನನ್ನನ್ನು ಕೂಡಿಸಿಕೊಂಡು ಕಾರು ಶಹಾಪುರ ಬೆಟ್ಟದ ಕಡೆಗೆ ಹೊರಟೆ ಬಿಟ್ಟಿತು.

             ತಿರುವು-ಮುರುವು ಘಟ್ಟ ಪ್ರದೇಶದ ರಸ್ತೆಯಲ್ಲಿ ಬೆಟ್ಟದಿಂದ ಜುಳುಜುಳು ಹರಿಯುವ ನೀರಿನ ಸುಮಧುರ ನೀನಾದದಲ್ಲಿ ಜಿಟಿಜಿಟಿ ಮಳೆಗೆ ಶಹಾಪುರ ಬೆಟ್ಟ ಮಲೆನಾಡಿನ ಅನುಭವವೆ ನೀಡುತಿತ್ತು. ಬೆಟ್ಟ ಹತ್ತಿದ ನಮ್ಮ ಕಾರುಗಳನ್ನು ಸಿದ್ದಲಿಂಗೇಶ್ವರ ದೇವಸ್ಥಾನದ ಹತ್ತಿರ ನಿಲ್ಲಿಸಿ, ಎಲ್ಲರೂ ದರ್ಶನ ಪಡೆದು, ಒಟ್ಟು 15 ಜನರ ಸ್ನೇಹಿತರ ತಂಡ, ಬೆಟ್ಟ ಹತ್ತುವುದಕ್ಕೆ ಶುರುಮಾಡಿತು. 

            ದಾರಿ ಮಧ್ಯ ಮಧ್ಯೆ ಈ ಪೌರಾಣಿಕ ಕೋಟೆಕೊತ್ತಲಗಳ ಇತಿಹಾಸ ಕೆದಕುತ್ತಾ, ಏರು ಪೇರು ದಾರಿಯ ಕಲ್ಲು ಬಂಡೆಯ ಮೇಲೆ ಸಾಗತೊಡಗಿದೇವು. ಶಹಾಪುರ ಬೆಟ್ಟದ ಇತಿಹಾಸವೇ ರೋಚಕವಾಗಿದೆ. ಮಹಾಬಲಶಾಲಿಯಾಗಿದ್ದ ಸಗರ ಚಕ್ರವರ್ತಿ, ಈ ಕೋಟೆಯನ್ನು ಕಟ್ಟಿಸಿದ್ದನಂತೆ. ವಿಜಯನಗರದ ಅರಸರು ಇದಕ್ಕೊಂದು ಹೊಸ ರೂಪ ಕೊಟ್ಟರಂತೆ. ಮುಂದೆ ಮೊಗಲ್ ಚಕ್ರವರ್ತಿಯ ದಾಳಿಗೆ ತುತ್ತಾಯಿತಂತೆ, ಹೀಗೆ ಹಲವಾರು ವಿಚಾರಗಳು ಒಬ್ಬೊಬ್ಬರ ಬಾಯಿಂದ ಒಂದೊಂದು ರೀತಿಯ ವಿಚಾರ ಹೊರಬರತೊಡಗಿದವು. 

           ಶಿಥಿಲವಾಗಿ ಹಾಳುಬಿದ್ದ ಕೋಟೆಯನ್ನು ಮತ್ತೆ ವಿಜಯಪುರದ ಬಾದ್ಶಾಹನಿಂದ ಪುನರ್ನಿರ್ಮಿಸಲಾಯಿತು ಎಂದು ಮತ್ತೊಬ್ಬ ಸ್ನೇಹಿತ ಶಿಕ್ಷಕರು ಹೇಳಿದರು. ಕೋಟಿಯಲ್ಲಿ ಕಂಡುಬರುವ ಅನೇಕ ದೇವಸ್ಥಾನಗಳು ಮಹಾಭಾರತದ ಹೆಸರಿನ ಕೊಳಗಳು, ಬಾವಿ ಮತ್ತು ಸ್ಮಾರಕಗಳು, ಇತಿಹಾಸದ ಮಾಹಿತಿಗೆ ಹಿಡಿದ ಕನ್ನಡಿಯಂತಿವೆ. ಕೋಟಿ ಸಮೀಪಕ್ಕೆ ಹೋದಂತೆ ವಿಶಾಲ ಬಯಲು, ಮುರಿದುಬಿದ್ದ ಕೋಟೆಯ ಗೋಡೆಗಳು, ದೇವಸ್ಥಾನಗಳ ಸುಂದರ ದೃಶ್ಯ ಸೆರೆ ಹಿಡಿಯಲು ತುಂತುರು ಮಳೆಯಲ್ಲಿ ನಮ್ಮೆಲ್ಲರ ಮೊಬೈಲ್ ಕ್ಯಾಮೆರಾಗಳು ಕಾಯುತ್ತಿದ್ದವು. ಎಲ್ಲರೂ ಚಿಕ್ಕಮಕ್ಕಳಂತೆ ಕೂಗುತ್ತಾ, ಚಿರುತ್ತಾ, ನಕ್ಕು ನಲಿಯುತ್ತಾ. ಫೋಟೋ ಕ್ಲಿಕ್ಕಿಸಿಕೊಂಡು ಪಾಳು ಬಿದ್ದ ಕೋಟೆಕೊತ್ತಲಗಳ ಮೇಲೇರಿ ನಿಂತು, ವಿಹಂಗಮ ನೋಟದಲ್ಲಿ ಶಹಪುರ ಪಟ್ಟಣವನ್ನು ವೀಕ್ಷಿಸಿದೆವು. ಆ ಬೆಟ್ಟದ ತುದಿಯಲ್ಲಿ ವರ್ಷದಲ್ಲಿ ಮೂರು ಬಾರಿ. (ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯ ದಿನಾಚರಣೆ ಕರ್ನಾಟಕ ವಿಮೋಚನಾ ದಿನಾಚರಣೆಯಂದು), ಧ್ವಜಾರೋಹಣ ಮಾಡುವ ವಿಚಾರ ಶಿವನಗೌಡ್ರು ಹೇಳಿದ್ರು. ಆ ಎತ್ತರದ ಭಾಗದಲ್ಲಿ ಬೆಟ್ಟದ ಮೇಲೆ ಹತ್ತಿ ಎಲ್ಲರೂ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮ ಪಟ್ಟೆವು. ಅಷ್ಟೊತ್ತಿಗೆ ಮಳೆ ಕಡಿಮೆಯಾಗಿ ಪಳ್ಳನೆ ಬಿಸಿಲು ಬಿದ್ದಿತು ಮೈಗೇ ಸ್ವಲ್ಪ್ ಹಿತ ಅನಿಸಿತು. ಜಿಟಿಜಿಟಿ ಮಳೆಗೆ ತೊಯ್ದು ಪ್ರಕೃತಿ ಸೂರ್ಯನ ಕಿರಣಗಳಿಂದ ಕೋಟೆ ಮತ್ತಷ್ಟು ಕಣ್ಮನ ಸೆಳೆಯ ತೊಡಗಿತು. ಸೂರ್ಯನೆದುರಿಗೆ ಮೈಯೊಡ್ಡಿ ನಿಂತು ನಮ್ಮ ಫೋನ್ ಕ್ಯಾಮೆರಾಕ್ಕೆ ಹಬ್ಬವಾದೆವು. 

              ಬಹುಮನಿ ಅರಸರ ಕಾಲದಲ್ಲಿ ಸಗರಗಡ ಎಂದು ಎಂದು ಹೆಸರಾದ ಶಹಪುರ ಇಲ್ಲಿಗೆ ಸೆರೆಯಾಳುಗಳನ್ನು ತಂದು ಇಡುತ್ತಿದ್ದರಂತೆ. ಬಹುಮನಿ ಸಾಮ್ರಾಜ್ಯ ಒಡೆದು ಹೋದ ನಂತರ, ಈ ಕೋಟೆಯು ವಿಜಯಪುರ ಅರಸರ ಒಡೆತನಕ್ಕೆ ಸೇರಿತಂತೆ. ಕೃಷ್ಣದೇವರಾಯನು ಕೂಡ ಇಲ್ಲಿಗೆ ಬಂದು ಯುದ್ಧ ಮಾಡಿದ್ದನಂತೆ. ಇದಕ್ಕೆ ಅನೇಕ ಕುರುಹುಗಳಿವೆಯಂತೆ, ಹೀಗೆ ಒಬ್ಬರ ಬಾಯಿಂದ ಒದೊಂದು ಇತಿಹಾಸ ನೆನಪಿಸುತ್ತಾ. ತಾವರೆಕೆರೆಯ ಮಾರ್ಗವಾಗಿ ಮೇಲುಪರ್ವತದ ಕಡೆಗೆ ಹೊರಟೆವು.

                  ನೆಲಮಟ್ಟದಿಂದ 600 ಅಡಿ ಎತ್ತರದಲ್ಲಿರುವ ಈ ಕೋಟೆ ಸುಮಾರು 800 ವರ್ಷಗಳ ಇತಿಹಾಸ ಹೊಂದಿದೆ. ಇದು ಎಂಟು ಸುತ್ತಿನಕೋಟೆ ಹೊಂದಿದ್ದು. ಈ ಬೆಟ್ಟದಲ್ಲಿ ಚರಬಸವೇಶ್ವರ ಗದ್ದಿಗೆ ಸಿದ್ದಲಿಂಗೇಶ್ವರ ದೇವಸ್ಥಾನ, ಮೌನೇಶ್ವರ ಅನುಷ್ಠಾನ ಸ್ಥಳ, ಗವಿ ರಂಗನಾಥ ದೇವಸ್ಥಾನ, ಪಾಂಡವರ ಕಲ್ಲು, ಭೀಮನ ಗವಿ, ಡಿಗ್ಗಿ ಸಂಗಮನಾಥ ದೇವಸ್ಥಾನ. ಬುದ್ಧ ಮಲಗಿದ ದೃಶ್ಯ ಹೀಗೆ ಅನೇಕ ಪ್ರವಾಸ ತಾಣವಾಗಿದೆ. ಹೀಗೆ ಮಾತನಾಡುತ್ತಾ ಹೋಗುವಷ್ಟರಲ್ಲಿ ಮೇಲಗಿರಿ ಪರ್ವತ ಬಂದೇ ಬಿಟ್ಟಿತು. ದೇವರ ದರ್ಶನ ಪಡೆದ ನಂತರ ಪ್ರಸಾದ ಸ್ವೀಕರಿಸಿದಾಗ, ಬೆಳಗ್ಗೆಯಿಂದ ಟ್ರಕ್ಕಿಂಗ್ ಮಾಡಿ ಸುಸ್ತಾಗಿದ್ದ ನಮ್ಮ ದೇಹಕ್ಕೆ ಮರು ಜೀವ ಬಂದಂತಾಯ್ತು. ಸ್ವಲ್ಪ ಹೊತ್ತು ಅಲ್ಲಿಯೇ ಕುಳಿತು. ಲಿಂಗಗಳ ದರ್ಶನ ಮಾಡಿಕೊಂಡು ಮತ್ತೆ ಚರಬಸವೇಶ್ವರ ಗದ್ದೆಗೆ ಕಡೆಗೆ ವಾಪಸ ಬರತೊಡಗಿದವು. 

              ಇದುವರೆಗೂ ದೂರದಿಂದ ನೋಡಿದ ಶಹಾಪುರ ಕೋಟೆ ತನ್ನ ಉದರದಲ್ಲಿ ಎಷ್ಟೆಲ್ಲಾ ಕುತೂಹಲಕಾರಿ ಇತಿಹಾಸ, ವಿಸ್ಮಯ ಹಾಗೂ ಪ್ರಕೃತಿ ಸೌಂದರ್ಯವನ್ನು ತುಂಬಿಕೊಂಡಿದೆ ಅನಿಸಿತು. ಅಲ್ಲಿ ಇಲ್ಲಿ ಮುರಿದುಬಿದ್ದ ಕೋಟೆಗಳು, ಬೆಟ್ಟದಲ್ಲಿ ಹೂತುಹೋದ ತೋಪುಗಳು ಕಂಡು, ಇಂತಹ ಪುರಾತನವಾದ ಕೋಟಿಗೆ ಸರಕಾರದ ರಕ್ಷಣೆ ಅವಶ್ಯವಾಗಿದೆ, ಸರಕಾರದಿಂದ ಯಾವುದೇ ರಕ್ಷಣೆ ಇಲ್ಲದೆ ಹೋದರೆ ಅನೈತಿಕ ಚಟುವಟಿಕೆಗಳ ತಾಣವಾಗಬಹುದೆಂದು ತಿಳಿದು ಮನಸ್ಸು ಗಾಸಿಯಾಯಿತು. 

        

 ಪೂರ್ವಯೋಜಿತ ದಂತೆ ದಾರಿಯ ಮಧ್ಯದಲ್ಲಿ ಒಂದು ತಂಡ ಊಟದ ವ್ಯವಸ್ಥೆ ಮಾಡಿ. ನಾನಾ ಬಗೆಯ ತಿಂಡಿ ತಿನಿಸುಗಳನ್ನು ಇಟ್ಟು ನಮಗಾಗಿ ಸಿದ್ಧಪಡಿಸಿಕೊಂಡು ಕಾಯುತ್ತಿತ್ತು. ಕೈಕಾಲು ತೊಳೆದುಕೊಂಡು ವಿಶಾಲವಾದ ಬಂಡೆ ಮೇಲೆ ಊಟಕ್ಕೆ ಕುಳಿತೆವು. ನಾನಾ ಬಗೆಯ ಮೃಷ್ಟಾನ್ನ ಭೋಜನ ಪ್ರೀತಿಯಿಂದ ಬಡಿಸಿತು ಆ ತಂಡ. ಏನು ತಿನ್ನಲಿ, ಏನು ಬಿಡಲಿ, ಎನ್ನುವಷ್ಟು ಪದಾರ್ಥಗಳು ತಟ್ಟೆಯಲ್ಲಿ. ಮೊದ್ಲೇ ಬೆಟ್ಟದಲ್ಲಿ ತಿರುಗಾಡಿ ಸುಸ್ತಾದ ನಮಗೆ. ಏನು ತಟ್ಟೆಯಲ್ಲಿ ಉಳಿಯಲಿಲ್ಲ. ಮೇಲೆ ಪಾನ ಬೀಡ ಜಗಿದು, ಚಾರಣ ಕುರಿತು ಮೆಲಕು ಹಾಕುತ್ತಾ ನಮ್ಮ ಶಾಲೆಯ ಕ್ವಾಟರ್ಸ್ ಕಡೆಗೆ ಹೆಜ್ಜೆ ಹಾಕಿದೆವು.

***********************************

 ✍️ ಬಸವರಾಜ ಭೂತಿ. ಶಿಕ್ಷಕರು

ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಶಹಾಪುರ

ಮೋ. ನಂ. 9900804567

Thursday, September 9, 2021

ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು

ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು 

ಪರಿಸರ ಸ್ನೇಹಿ ಗಣಪ


ಅಪ್ಪ ತಂದನು, ಜೇಡಿ ಮಣ್ಣ
ಕಲ್ಸಿ ಕೊಟ್ಟನು, ಅದನು ನುಣ್ಣ

ಉದ್ದನೆ ಸೊಂಡಿಲು, ತೀಡಿದ ಅಣ್ಣ
ತಂಗಿಯು ಇಟ್ಟಳು, ಅದ್ಕೆರಡು ಕಣ್ಣ

ಅಮ್ಮ ಮಾಡಿದಳು, ಹೊಟ್ಟೆ ಡೊಣ್ಣ
ತಮ್ಮ ಮೂಡಿಸಿದ, ವಿಶಾಲ ಕರ್ಣ

ಬಾಜಾರದಿಂದ, ತಂದರು ಸುಣ್ಣ
ಎಲ್ಲರೂ ಸೇರಿ, ಬಳಿದರು ಬಣ್ಣ

ಇಟ್ಟರು ಮುಂದೆ, ಬಗೆ ಬಗೆ ಹಣ್ಣ
ಕಚ್ಚಿ ತಿನ್ನುಲು, ಮೂಷಿಕ ಸಣ್ಣ

ಹರ್ಷದಿ ಕೂಡಿ, ಮಾಡಿದ್ರು ಪೂಜಿ
ಕುಣಿಯುತಾ ಹಚ್ಚಿ, ಬ್ಯಾಂಡು ಬಾಜಿ

ವಿಸರ್ಜಿಸಲು ತಂದರು, ಮಣ್ಣಿನ ಹೂಜಿ
ವಿಸರ್ಜಿಸಿ ನೆಟ್ಟರು, ಹೂವು ಜಾಜಿ
---------------------------------------------
ರಚನೆ: ಬಸವರಾಜ ಭೂತಿ, ಶಿಕ್ಷಕರು




Sunday, August 15, 2021

ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ ಬೇವಿನಹಳ್ಳಿಯಲ್ಲಿ 75ನೇ ಸ್ವಾತಂತ್ರೋತ್ಸವದ ಸಂಭ್ರಮ

ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ ಬೇವಿನಹಳ್ಳಿಯಲ್ಲಿ 75ನೇ ಸ್ವಾತಂತ್ರೋತ್ಸವದ ಸಂಭ್ರಮ

ಶಹಾಪುರ ಪಟ್ಟಣದಿಂದ 5 ಕಿಲೋಮೀಟರ ದೂರದಲ್ಲಿರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿ ನಡೆಯುತ್ತಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಬೇವಿನಹಳ್ಳಿ ಕ್ರಾಸ್ ಇಲ್ಲಿ ಇಂದು 75 ನೇ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಸುರಯ್ಯಬೇಗಂ ಹಾದಿಮನಿ ಅವರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿ  ಪ್ರತಿವರ್ಷವೂ ಸ್ವಾತಂತ್ರ್ಯ ದಿನಾಚರಣೆಯನ್ನು ಮಕ್ಕಳೊಂದಿಗೆ ಆಚರಿಸಲಾಗುತ್ತಿತ್ತು. ಆದರೆ ಈ ಕರೋನಾ ಮಹಾಮಾರಿ ಇಂದಾಗಿ ಮಕ್ಕಳು ಶಾಲೆಗೆ ಬರಲು ಆಗುತ್ತಿಲ್ಲ. ಆದಷ್ಟು ಬೇಗ ಈ ಮಹಾಮಾರಿ ತೊಲಗಿ ಮಕ್ಕಳು ಶಾಲೆಯ ಅಂಗಳದಲ್ಲಿ ನಲಿದು ಆಡುವಂತಾಗಲಿ ಎಂದರು. ಇದೇ ಸಂದರ್ಭದಲ್ಲಿ ನಮ್ಮ ಶಾಲೆಯ ಸಂಗೀತ ಶಿಕ್ಷಕಿಯರಾದ ಶ್ರೀಮತಿ ಸೌಮ್ಯ ಕುಲಕರ್ಣಿಯವರಿಗೆ "ಹೈದ್ರಾಬಾದ್ - ಕರ್ನಾಟಕದ ಸಂಸ್ಥಾನಗಳಲ್ಲಿ ಸಂಗೀತ" ಎಂಬ ವಿಷಯದ ಮೇಲೆ ಪ್ರಬಂಧವನ್ನು ಮಂಡಿಸಿ, ಡಾಕ್ಟರೇಟ್ ಪದವಿಯನ್ನು ಪಡೆದಿದ್ದಕ್ಕಾಗಿ ಅವರಿಗೆ ನಮ್ಮ ವಸತಿ ಶಾಲೆಯವತಿಯಿಂದ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.

 ಈ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ಸಿಬ್ಬಂದಿಗಳಾದ ಶ್ರೀ ಬಸವರಾಜ ಭೂತಿ, ಶ್ರೀ ಹನುಮಂತ ಬಿಂಗಿ,  ಶ್ರೀ ಶಾಂತಗೌಡ, ಶ್ರೀ ಈರಣ್ಣ, ಉಪನ್ಯಾಸಕರಾದ ಶ್ರೀ ನಿಂಗಪ್ಪ, ದೈಹಿಕ ಶಿಕ್ಷಕರಾದ ಶ್ರೀಕಾಂತ ರಾಥೋಡ, ಬಸನಗೌಡ ಬಿರಾದಾರ, ಡಾ. ಸೌಮ್ಯ ಕುಲಕರ್ಣಿ, ಶ್ರೀಮತಿ ಗೌರಮ್ಮ, ಶ್ರೀಮತಿ ಸ್ವಪ್ನಾ ತಳವಾರ, ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.










Friday, February 19, 2021

 

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ನಡೆಸಲಾದ ಎಲ್ಲಾ ವಿಷಯಗಳ common test - 1 ರ ಕೀ ಉತ್ತರಗಳು ನೋಡಲು ಈ ಕೆಳಗಿನ ಲಿಂಕುಗಳನ್ನು ಒತ್ತಿ

>>ಕನ್ನಡ

>>ಇಂಗ್ಲೀಷ್

>>ಹಿಂದಿ

>>ಗಣಿತ

>>ವಿಜ್ಞಾನ

>>ಸಮಾಜ ವಿಜ್ಞಾನ

Tuesday, February 16, 2021

 👉 SSLC ವಿದ್ಯಾರ್ಥಿಗಳಿಗಾಗಿ ಪರಿಣಿತ ಶಿಕ್ಷಕರಿಂದ ವಿಶೇಷವಾಗಿ ತಯಾರಿಸಿದ ಎಲ್ಲಾ ವಿಷಯಗಳ ಸಂಪೂರ್ಣ ಸ್ಟಡಿ ಪ್ಯಾಕೇಜ್ (Study Package) ಡೌನ್ ಲೋಡ್ ಮಾಡಿಕೊಳ್ಳಿ.

- ಕನ್ನಡ 

- ಇಂಗ್ಲೀಷ್

- ಹಿಂದಿ 

- ಗಣಿತ (EM)

- ವಿಜ್ಞಾನ (EM)

- ಸಮಾಜ ವಿಜ್ಞಾನ (EM)  

👉 SSLC ಪರೀಕ್ಷೆಯ ಜೂನ್ 2012 ರಿಂದ  ಜೂನ್ 2019 ರ ವರೆಗಿನ ಎಲ್ಲಾ ವಿಷಯಗಳ ಮಾದರಿ ಹಾಗೂ ಹಳೆಯ ಪ್ರಶ್ನೆ ಪತ್ರಿಕೆಗಳ ಸಂಗ್ರಹ ಡೌನ್ ಲೋಡ್ ಮಾಡಿಕೊಳ್ಳಿ. 



👉 ಪರಿಣಿತ ಶಿಕ್ಷಕರು ತಯಾರಿಸಿರುವ 10ನೇ ತರಗತಿಯ ಪರ್ಯಾಯ ಶೈಕ್ಷಣಿಕ ಯೋಜನೆಯನ್ನು ಡೌನ್ ಲೋಡ್ ಮಾಡಿಕೊಳ್ಳಿ 

- ಇಂಗ್ಲೀಷ್

- ಹಿಂದಿ 

- ಗಣಿತ

- ವಿಜ್ಞಾನ 

- ಸಮಾಜ ವಿಜ್ಞಾನ

 


*****************


Download Hindi study materials

Please share

🌹🙏🌹

Thursday, February 11, 2021

koshish karne walon ki kabhi haar nahi hoti

 ಡಾ. ದೇವರಾಜ ಸರ್ ಅವರ ಮಾರ್ಗದರ್ಶನದಲ್ಲಿ 

ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಚಾಮರಾಜ ಪೇಟೆ  ಮಕ್ಕಳು koshish karne walon ki kabhi haar nahi hoti ಪದ್ಯ ಕಂಠ ಪಾಠ ಮಾಡುತ್ತಿರುವದು.




Motivational songs

koshish karne walon ki kabhi haar nahi hoti 

Friday, January 1, 2021

School Photos

 

ಬರದ ಬರೆ

  ಮೊನ್ನೆ ಶನಿವಾರ ಅರ್ಧ ದಿನದ ಶಾಲೆ ಮುಗಿಸಿ,  ಬಸ್ಸತ್ತಿ  ಊರ ಕಡೆಗೆ ಹೊರಟೆ. ನನ್ನೂರಿಗೆ ಹೋಗದೆಯು ತುಂಬಾ ದಿನಗಳಾಗಿತ್ತು. ಹೋಗುವ ದಾರಿ ಮಧ್ಯ ಮಧ್ಯದಲ್ಲಿ ಅಲ್ಲಲ್ಲಿ ಬ...