Sunday, July 24, 2022

ಮಕ್ಕಳಾಟವು ಚಂದ ,ಮತ್ತೆ ಯೌವನ ಚಂದ

 ‘ಮಕ್ಕಳಾಟವು ಚಂದ ,ಮತ್ತೆ ಯೌವನ ಚಂದ


‘….. ಈ ಹಳೆಯ ಜಾನಪದ ಗೀತೆಯನ್ನು  ಮೂರೋ ಅಥವಾ ನಾಲ್ಕನೇ ತರಗತಿಯಲ್ಲಿ ಕೇಳಿದ ನೆನಪು ಈ ಜಾನಪದ ಮಕ್ಕಳ ಆಟದ ಚಂದವು ತಿಳಿಸುತ್ತದೆ ಅಲ್ವಾ..! ಹೀಗೆ ನಮ್ಮ ಸ್ನೇಹಿತನೊಬ್ಬ ಬೆಳಗ್ಗೆ ಮಕ್ಕಳನ್ನು ಕರೆದುಕೊಂಡು ಬಂದು ನಮ್ಮ ಶಾಲೆಯ ಮುಂದೆ ನಿಂತು ನನಗೆ ಕಾಲ್ ಮಾಡಿದ ಮಕ್ಕಳನ್ನು ಹೊರಗಡೆ ಕರೆದುಕೊಂಡು ಹೋಗಿ ಸುತ್ತಾಡಿಸಿಕೊಂಡು ಬರೋಣ ಬಾ ಎಂದು, ನಾನು ತಡ ಮಾಡದೆ ಮಕ್ಕಳನ್ನ ರೆಡಿ ಮಾಡಿಕೊಂಡು ಬಂದೆ ಒರಟು ನಿಂತೆ ನಮ್ಮ ಶಾಲೆಯ ಪಕ್ಕದ ಒಂದು ಪಾರ್ಮ ನಲ್ಲಿ. 

 ಇಂದಿನ ಯಾಂತ್ರಿಕ ಜೀವನದಲ್ಲಿ ಹೊರಾಂಗಣ ಆಟವನ್ನೇ ಮರೆತು. ಬರೀ ಟಿವಿ, ವಿಡಿಯೋ ಮೊಬೈಲ್ ಗೇಮ್ಸ್ ಇತ್ಯಾದಿಗಳಿಗೆ ಅಂಟಿಕೊಂಡಿದ್ದ ಮಕ್ಕಳಿಗೆ ಈವರೆಗಿನ ಪರಿಸರ ಕಂಡು ಖುಷಿಯಾಗುತ್ತಿತ್ತು. ಸುಮಾರು ಸುಮಾರು ಎಂಟು ಒಂಬತ್ತು ಮಕ್ಕಳು ಸೇರಿ ಆ ಪರಿಸರದಲ್ಲಿ ಕುಣಿದು ಕೊಪ್ಪಳಸಿದರು. ಶಾಲೆ ಮನೆ ಹೋಮಾರ್ಕುಗಳಲ್ಲಿ ಬಂದಿಯಾಗಿದ್ದ ಅವರು ಎಂದು ಸ್ವತಂತ್ರ ಪಕ್ಷಿಗಳಾಗಿದ್ದರು.

ಅವಿಭಕ್ತ ಕುಟುಂಬದ ಹಿರಿಯರ ಗರಡಿಯಲ್ಲಿ ಮುಟ್ಟಿಗೆ ತಿಂದು ಗಟ್ಟಿ ಮುಟ್ಟಾದ ನಮ್ಮ  ಮಕ್ಕಳಿಗೆ ಇಂದು ಪಿಜ್ಜಾ, ಬರ್ಗರ್, ಕುರುಕುರೆ, ಆಯಿಸ್ ಕ್ರೀಮ್, ಚಾಕಲೇಟ್ ತಿನಿಸಿ ಅಳ್ಳಿ ಪುರಿಯಾಗಿ ಮಾಡುತಿದ್ದೆವೆ. ಆಗ ಹಿರಿಯರಿದ್ದ ಮನೆಯಲ್ಲಿ ಪ್ರೀತಿ, ವಿಶ್ವಾಸವಿತ್ತು, ಸ್ನೇಹ, ಸಂಭಂದಗಳಿಗೆ ಬೆಲೆ ಇತ್ತು.. ಆದರೆ ಇಂದು ಪಟ್ಟಣದಲ್ಲಿ ಬೆಳೆದ ನಮ್ಮ ಮಕ್ಕಳಿಗೆ  ಅವಿಭಕ್ತ ಕುಟುಂಬ ಪ್ರೀತಿ ಮಕ್ಕಳಿಗೆ ಸಿಗುತ್ತಿಲ್ಲ, ಸಂಬಂಧಗಳ ಬಗ್ಗೆ ಅರಿವಿಲ್ಲ. 

ಇಗಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳನ್ನ ನಾವುಗಳು ಪುಸ್ತಕ ಹುಳುಗಳನ್ನಾಗಿ ಮಾಡುತ್ತಿದ್ದೇವೆ ಹೊರತು ಅವರನ್ನ ಮಕ್ಕಳಾಗಿ ನೋಡುತ್ತಿಲ್ಲ. ಒಣ ಗೌರವಕ್ಕಾಗಿ ಬಡಿದಾಡುತಿದ್ದೆವೆ. ಕಾನ್ವೆಂಟ್ ಶಾಲೆಗಲ್ಲಿ ಲಕ್ಷಾನುಗಟ್ಟಲೆ ಡೊನೇಷನ್ ನೀಡಿ ಅವರಿಗೆ ಒದಿಸುತಿದ್ದೆವೆ.  ಬರೀ ಓದು ಓದು ಮಕ್ಕಳಿಗೆ ಕಂಠ ಪಾಠ ಜೊತೆಗೆ ಹೋಮ್ ವರ್ಕ್ಸ್, ಒತ್ತಡ ಅವರಿಗೆ ಅವರ ಇಷ್ಟ ನಷ್ಟಗಳಿಗೆ ಬೆಲೆನೆ ಇಲ್ಲದೆ  ಸ್ವಾತಂತ್ರ್ಯ ಕಸಿದುಕೊಳ್ಳುತ್ತಿವೆ.  ಮಕ್ಕಳನ್ನು ಇತರೆ ಚಟುವಟಿಕೆಗಳಲ್ಲಿ ಗಮನ ಹರಿಸುತಿಲ್ಲ. ಬೇಕು ಬೇಡಗಳನ್ನು ಇಡೇರಿಸುವಲ್ಲಿ ಪಾಲಕರಾದ ನಮ್ಮ ಕರ್ತವ್ಯಗಳು ಮರೆತಿದ್ದೆವೆ. 

ದಿನವಿಡೀ ಕೆಲಸದ ಒತ್ತಡ ಇದ್ದಿದ್ದೆ, ವಾರಕ್ಕೆ ಒಂದು ಒಮ್ಮೆಯಾದರೂ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಮಕ್ಕಳ ಜೊತೆಗೆ ಬೆರೆಯ ಬೇಕು ಇಷ್ಟವಾದ ಸ್ಥಳಗಳಿಗೆ ಕರೆದುಕೊಂಡು ಹೋಗಬೇಕು. ತಿಂಗಳು ಒಮ್ಮೆಯಾದರೂ ಹಳ್ಳಿ ಕಡೆಗೆ ಹೋಗಿ ಅವರ ಅಜ್ಜ ಅಜ್ಜಿಯರ ಜೊತೆ ಬಿಡಬೇಕು. ಸಂಬಂಧಗಳ ಬಗ್ಗೆ ತಿಳಿಸಿಕೊಡ ಬೇಕು. ಅದರಿಂದ ನಾವು ನಮ್ಮವರು ಎಂಬ ಭಾವನೆಗಳು ಮೂಡುವವು.


             ನನ್ನ ಅಭಿಪ್ರಾಯದಲ್ಲಿ ಮಕ್ಕಳಿಗೆ ಹೆಚ್ಚು ಹೊರಾಂಗಣ ಆಟವನ್ನು ಆಡಲು ಪ್ರೇರೇಪಿಸಬೇಕು. ಮಕ್ಕಳ ಜೊತೆ ನಾವು ಆಟವಾಡುವುದರಿಂದ ಮಕ್ಕಳಲ್ಲಿ ಮಾನಸಿಕವಾಗಿ ದೈಹಿಕವಾಗಿ ಆರೋಗ್ಯವಾಗಿರಲು ಕಾರಣವಾಗುತ್ತದೆ. ಈಜು, ಗಾಳಿ ಪಟ ಹಾರಿಸೋದು ಹೀಗೆ ಹಲವಾರು ಆಟಗಳಿವೆ. ಹಿಂದೆ ನಾವು ಗಾಳಿಪಟ ಹಾರಿಸುವಾಗ ಅದೆಷ್ಟು ಸಂತೋಷ ವೆನಿಸುತ್ತಿತ್ತು ?! ಈಗಿನ ಮಕ್ಕಳಿಗೆ ಅದರ ಖುಷಿ ಸಿಗುತ್ತಿಲ್ಲ ಬರಿ ಓದು ಓದು ಓದು ಅಷ್ಟೇ... ಇಂತಹ ಸಣ್ಣ ಪುಟ್ಟ ಆಟಗಳು ಮಕ್ಕಳಿಗಷ್ಟೇ ಅಲ್ಲದೆ ನಮಗೂ ಕೂಡ ಖುಷಿ ನೀಡುತ್ತವೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತವೆ.

ಇಂದು ಭಾನುವಾರ ನಮ್ಮ ಸ್ನೆಹಿತರ ಜೊತೆ ಸೆರಿ ಮಕ್ಕಳನ್ನು ಹೊರಗಡೆ ಸುತ್ತಾಡಿಸಿಕೊಂಡು ಬಂದೆ ಅವರಿಗಾದ ಆನಂದ ಖುಷಿಕಂಡು ನನಗೂ ಸಂತೋಷವಯಿತು...

ಬಸವರಾಜ ಭೂತಿ,  ಶಿಕ್ಷಕರು

Sunday, July 17, 2022

ಶಿಕ್ಷಕ ಸೇವೆಗೆ ಸೇರಿ ಇಂದಿಗೆ ಹತ್ತು ವರುಷ

 ಶಿಕ್ಷಕ ಸೇವೆಗೆ ಸೇರಿ ಇಂದಿಗೆ ಹತ್ತು ವರುಷ 

ನನ್ನ ಸ್ಮೃತಿ ಪಟಲ ದಲ್ಲಿರುವಂತೆ ೨೦೧೧ ಡಿಸೆಂಬರನಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ನೇಮಕಾತಿಯ ತಾತ್ಕಾಲಿಕ ಆಯ್ಕೆ  ಪಟ್ಟಿ ಪ್ರಕಟಗೊಂಡಾಗ ನಾನಿನ್ನು ಸುಣಗಾರ ಪಿಯು ಕಾಲೇಜನಲ್ಲಿ ಅರೆಕಾಲಿಕ ಶಿಕ್ಷಕನಾಗಿ  ಮತ್ತು ಆಲಮೇಲ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೆ. 

 

ಫಲಿತಾಂಶದ ಸುದ್ದಿ ತಿಳಿದ ಕ್ಷಣವೇ ಶಾಲೆ ಬಿಟ್ಟು ಮಧ್ಯಾಹ್ನವೇ ಊರಿಗೆ ಹೊರಟು ನಿಂತೆ ಸಿಂದಗಿಗೆ.  ಬರುವ ದಾರಿ ಮಧ್ಯ ಮನಸ್ಸಿಗೆ ಏನೋ ಒಂಥರ ಕುತೂಹಲ  ಕಸಿವಿಸಿ ಕಳವಳ ಭಯ ಮನದಲ್ಲಿ ವiನೆಮಾಡಿತ್ತು. ಹೇಗೋ ಆಯ್ಕೆಯಾದ ವಿಷಯ ನಾನು ಬರುವಷ್ಟರಲ್ಲೆ ಊರಲೆಲ್ಲ ಸ್ನೇಹಿತರಿಗೆ ತಿಳಿದಿತ್ತು. 

ಬರುಬರುತ್ತಲೆ ನನಗೆ ಶುಭಾಶಯ ತಿಳಿಸಲು ಪ್ರಾರಂಭಿಸಿದರು. ನನಗೆ ಗೊತ್ತಿರದೆ ನಾನು ಕೆಟಗೆರಿ ಕೋಟಾದಡಿಯಲ್ಲಿ ಆಯ್ಕೆಯಾಗಿದ್ದೆ. ಇದು ಇನ್ನೂ ತಾತ್ಕಾಲಿಕ ಆಯ್ಕೆ ಪಟ್ಟಿಯಾಗಿದ್ದರಿಂದ ಅಂತಿಮ ಆಯ್ಕೆ ಪಟ್ಟಿ ಬರುವರೆಗೂ ಹೆಚ್ಚಿಗೆ ಖುಷಿ ಪಡುವದು ಬೇಡವೆಂದು ಸುಮ್ಮನಾದೆ. 




ಕೆಲವೆ ತಿಂಗಳಗಳಲ್ಲೆ ಅಂತಿಮ ಆಯ್ಕೆ ಪಟ್ಟಿಯು ಬಿಡುಗಡೆಯಾದಾಗ ಮೊದಲಿನಗಿಂತಲೂ ಎರಡು ಸ್ಥಾನ ಮೆಲೇರಿ ಶಿಕ್ಷಕನಾಗುವ ಕನಸು ಗಟ್ಟಿ ಮಾಡಿಕೊಂಡಿದ್ದೆ. ಆಗ ಮನಸಿಗಾದ ಖುಷಿ ಅಷ್ಟಿಷ್ಟಲ್ಲ. 

೦೩.೦೬.೨೦೧೨ ರಂದು ದೇವರಾಜ ಅರಸು ಭವನದಲ್ಲಿ ಬೆಂಗಳೂರಲ್ಲಿ ಸ್ಥಳ ನಿಯುಕ್ತಿಯು ನಡೆಯಿತು. ನನ್ನ ರ‍್ಯಾಂಕಿAಗ ಕಡಿಮೆ ಇರುವ ಕಾರಣ ಉತ್ತರ ಕರ್ನಾಟಕದಲ್ಲೇಲ್ಲು ಒಂದು  ಸ್ಥಳ ಖಾಲಿ ಇರದ ಕಾರಣ ಅನಿವರ‍್ಯವಾಗಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಸೋಮನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸ್ಥಳ ನಿಯುಕ್ತಿಯು ಮಾಡಿಕೊಳ್ಳಬೇಕಾಯಿತು. ಸಿಂಧುತ್ವ ತೆಗೆಸಿ ನೇಮಕಾತಿ ಆದೇಶ ಪಡೆದು ಸೇವೆಗೆ ಹಾಜರಾಗಬೇಕಾದರೆ ಒಂದುವರೆ ತಿಂಗಳುಗಳೆ ಹಿಡಿದವು. 

 ಜುಲೈ ೨೦. ೨೦೧೨ ಇದು ನನ್ನ ಜೀವನದ ಪುಟದಲ್ಲಿ ಸುವರ್ಣಾಕ್ಷರಗಳಲಿ ಬರೆದಿಟ್ಟ ದಿನ. ಸಮಾಜದಲ್ಲಿ ಗೌರವಿತ ಸ್ಥಾನವಿರುವ ಶಿಕ್ಷಕನಾಗಿ  ಕರ್ತವ್ಯಕ್ಕೆ ಹಾಜರಾದ ಮೋದಲ ದಿನ. ದುರಾದೃಷ್ಟವಶ ನಾನು ಹಾಜರಾದ ಶಾಲೆಯಿಂದ ಒಂದು ವರ್ಷ ಸಂಬಳತೆಗೆದುಕೊAಡರು ಒಂದು ದಿನವು ಆ ಶಾಲೆಯ ಮಕ್ಕಳಿಗೆ ಪಾಠಮಾಡಲಾಗಲಿಲ್ಲ. 
ಕಾರಣ ನನ್ನ ಹುದ್ದೆಗೆ ಕೋರ್ಟ ತಡೆಯಾಜ್ಞಯಿತ್ತು. ಹಾಜರಾದ ಕೆಲವೇ ನಿಮಿಸಿಗಳಲ್ಲಿ ಅಲ್ಲಿಂದ ಬಿಡುಗಡೆ ಹೊಂದಬೆಕಾಯಿತು.  ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮಂಡ್ಯ ಇವರ ಸಹಾಯದಿಂದ ಮೇಲುಕೋಟೆಯ ಮೊರಾರ್ಜಿ ದೇಸಾಯಿ  ವಸತಿ ಶಾಲೆಗೆ ನಿಯೋಜನೆ ಮಾಡಿಸಿಕೊಂಡು ಚಲುವನಾರಾಯಣ ಸ್ವಾಮಿ ಸನ್ನಿದಾನದಲ್ಲೆ  ಮೊದಲು ಕರ್ತವ್ಯ ಸುರುಮಾಡಿದೆ. 

 ಕರ್ತವ್ಯಕ್ಕೆ ಹಾಜರಾದ ಕೆಲವೆ ದಿನಗಳಲ್ಲಿ ಕೋರ್ಟ್ ಕೇಸ್ ಇರುವ ಶಾಲೆಗಳಲ್ಲಿ ಶಿಕ್ಷಕರನ್ನು ಬಿಡುಗಡೆಗೊಳಿಸಿ ಕೇಂದ್ರ ಕಚೇರಿಗೆ ಕಳಿಸುವಂತೆ ಆದೇಶ ಬಂತು. ನಿಯೋಜನೆ ಶಾಲೆಯಾದ್ದರಿಂದ ಅನಿವರ‍್ಯವಾಗಿ ಅಲ್ಲಿಂದ ಬಿಡುಗಡೆಯಾದೆ ಆ ಶಾಲೆಯಲ್ಲಿ ಕಳೆದ್ದು ಕೆವಲ ೧೯ ದಿನಗಳಾದರು ಶಿಕ್ಷಕರು ಮತ್ತು ಮಕ್ಕಳೊಂದಿಗಿನ ಒಡನಾಟ ನನ್ನನು ಭಾವನಾತ್ಮಕವಾಗಿ ಮಾಡಿತು. 
ನನ್ನ ಬಿಡುಗಡೆ ಸುದ್ದಿ ತಿಳಿದ ಮಕ್ಕಳು ತೆಕ್ಕೆಗೆ ಬಿದ್ದು ಅಳತೊಡಗಿದರು ನಾನು ಗದ್ಗದಿತನಾದೆ. ನನ್ನ ಜೀವನದಲ್ಲಿ ಬಹಳಷ್ಟು ದು:ಖ ತರಿಸಿದ ಮೊದಲ ಕಹಿ ಅನುಭವ   ಆದು. ಬಾರವಾದ ಮನಸ್ಸಿಂದಲೆ ಬಂದು ಕೇಂದ್ರ ಕಚೇರಿಗೆ ವರದಿ ಮಾಡಿಕೊಂಡೆ. 

 
  ರಾಜ್ಯದಲ್ಲೆಲ್ಲೂ ಹಿಂದಿ ಹುದ್ದೆ ಖಾಲಿ ಇರದ ಕಾರಣ ಹೆಚ್ಚುವರಿಯಾಗಿ. ಮರು ಸ್ಥಳ ನಿಯುಕ್ತಿಯವರೆಗೆ ಬೆಂಗಳೂರಿನಲ್ಲೆ ಇರಬೇಕಾಯಿತು. ನನ್ನಂತೆ ನೂರಾರು ಜನ ಶಿಕ್ಷಕರು ಹೆಚ್ಚುವರಿಯಾಗಿ ಮರು ಸ್ಥಳ ನಿಯುಕ್ತಿಗಾಗಿ ಕೇಂದ್ರ ಕಚೇರಿ ಮುಂದೆ ದಿನಾ ಕಾಯುತಿದ್ದರು. ಆಗಿನ್ನು ನನಗೆ ಸಂಬಳವು ಇರಲಿಲ್ಲ ಹತ್ತಿರ ಬಿಡಿಗಾಸು ಇರಲಿಲ್ಲ ಊರಿಗೆ ಹೊಗೋಕು ಆಗದೆ ಅಲ್ಲೆ ಇರಾಕು ಆಗದೆ ಪರದಾಡಿದೆ.

ನಮ್ಮ ಪರಿಸ್ಥಿತಿ ಕಂಡು ಮಾನ್ಯ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಶಾಂತಪ್ಪ ಸರ್ ಅವರು ಎಲ್ಲಿಯಾದರೂ ಯಾವುದೇ ಖಾಲಿ ಹುದ್ದೆ ಹುಡುಕಿಕೊಂಡು ಹಾಕಿ ಕೊಡುವೆಯಂದರು. ನನ್ನ ಅದೃಷ್ಟಕ್ಕೆ ಸ್ನೇಹಿತರೊಬ್ಬರು ಶಿಕ್ಷಣ ಇಲಾಖೆಯಿಂದ ಬಿಡುಗಡೆಗೊಂಡು  ನಿಲಯ ಪಾಲಕರ ಹುದ್ದೆಗೆ ಹಾಜರಾಗ ಕಾರಣ ಬಸವನ ಬಾಗೇವಾಡಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಕೋಲಾರ ಇಲ್ಲಿಗೆ ನಿಲಯ ಪಾಲಕನಾಗಿ ನಿಯೋಜಿಸಿಕೊಂಡು ನನ್ನ ಸ್ವಂತ ಜಿಲ್ಲೆಗೆ

ಅಗಷ್ಟ ೧೪. ೨೦೧೨ ರಂದು  ಬಂದು ಹಾಜರಾದೆ. ಊರ ಕಡೆಗೆ ಬಂದ ಖುಷಿಯೊಂದಡೆಯಾದರೆ. ಮೂಲಭೂತ ಸೌಕರ್ಯವು ಇರದೆ ಆಗೀಗ ಬಿಳುವಂತ ಬಾಡಿಗೆ ಕಟ್ಟಡದ ಆ ಶಾಲೆಯ ಸ್ಥಿತಿ ಮನಸ್ಸಿಗೆ ತುಂಬಾ ಬೇಸರವಾಯಿತು. ಇದ್ದರಿಂದ ಆ ಶಾಲೆಯಲ್ಲಿ ಸಾಕಷ್ಟು ಸಮಸ್ಯೆ, ತೊಂದರೆಗಳನ್ನು ಎದುರಿಸಬೇಕಾಯಿತು. ಸುಧಾರಿಸಿಕೊಳ್ಳಲು ಹಲವು ದಿನಗಳೆ ಬೇಕಾದವು. ಕಷ್ಟನೋ, ಸುಖನೋ ಒಂದು ವರ್ಷ ಕರ್ತವ್ಯ ನಿರ್ವಹಿಸಿದೆ. 

 ಎಲ್ಲವು ಸರಿಯಾಗಿ ನಡೆಯುತ್ತಿದೆಯನ್ನುವಷ್ಟರಲ್ಲಿ ಮತ್ತೆ ನನ್ನ  ಮರು ವಿನ್ಯಾಸದಡಿ ವರ್ಗಾವಣೆಮಾಡಿ ಮಂಡ್ಯ ಜಿಲ್ಲೆಯ ಪಾಂಡವಪುರಕ್ಕೆ ಆದೇಶಿಸಲಾಯಿತು. ಏನಮಾಡುವುದು ಒಂದು ತಿಳಿಯದೆ ಬೆಂಗಳೂರಿಗೆ ಓಡಿ ಬಂದು ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಜೆ.ಡಿ ಸರ್ ಬಳಿ ನನ್ನ ಸಮಸ್ಯ ತೊಡಿಕೊಂಡರು ಕೆಳುವ ಪರಿಸ್ಥಿಯಲ್ಲಿ ಅವರಿರಲಿಲ್ಲ ಹಾಗೋ ಹಿಗೋ ಎನೊ ಒಂದು ಮಾಡಿ ಸ್ಥಳ ಉಳಿಸಿಕೊಂಡು ಬಂದೆ. ಆಗ ಶಿಕ್ಷಣ ಇಲಾಖೆಯಲ್ಲಿ ನೇಮಕಾತಿಯಾದ್ದರಿಂದ ಶಹಾಪುರನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 


 ಹಿಂದಿ ಹುದ್ದೆ  ಖಾಲಿಗಿದ್ದು ಅಲ್ಲೆ ಕೆಲಸ ಮಾಡುತಿದ್ದ ಸ್ನೇಹಿತರೊಬ್ಬರಿಂದ ತಿಳಿತು. ದೌಡಮಾಡಿ ಈ ಶಾಲೆಗೆ ವರ್ಗಾಯಿಸಿಕೊಂಡು ಬಂದೆ. ವಾರ್ಡನ ಹುದ್ದೆಗಿಂತ ನನಗೆ ಶಿಕ್ಷಕ ಹುದ್ದೆಯಲ್ಲೆ ನನಗೆ ತೃಪ್ತಿ. ಕಾಕತಾಳಿಯ ಎಂಬAತೆ ನಿಲಯ ಪಾಲಕನಾಗಿ ನಿಯೋಜನೆಗೊಂಡ ದಿನದಂದೆ ಅಗಸ್ಟ ೧೪. ೨೦೧೩ರಂದೆ ಬಂದು ಈ ಶಾಲೆಗೆ ಹಾಜರಾದೆ.


 ನಿಜ ಹೇಳಬೇಕು ಅಂದ್ರೆ ಇಷ್ಟು ದಿನದ ಈ ಶಿಕ್ಷಕ ವೃತ್ತಿ ಸಾಕಷ್ಟು ತೃಪ್ತಿ ತಂದಿದೆ. ೧೦ ವರ್ಷದ ಈ ನನ್ನ ಸೇವೆಯಲ್ಲಿ ವೃತ್ತಿ ನಿಷ್ಠನಾಗಿ ಬೋಧನೆಗೆ ಮೋಸ ಮಾಡದೆ ಪ್ರಾಮಾಣಿಕವಾಗಿ ನ್ಯಾಯ ಒದಗಿಸಿದೆನೆಂಬ ಆತ್ಮಭಿಮಾನ ನನ್ನಲ್ಲಿದೆ. ಶಾಲೆ ಹಾಗೂ ಮಕ್ಕಳ ಶ್ರೇಯೋಭಿವೃದ್ದಿಗಾಗಿ ದುಡಿಯುವ ಹಂಬಲವಿದೆ.

ಈ ಶಾಲೆಯಿಂದ, ಮಕ್ಕಳಿಂದ, ಜೊತೆಗಾರ ವೃತ್ತಿ ಮಿತ್ರರಿಂದ, ತುಂಬಾನೆ ಕಲಿತಿದ್ದೆನೆ. ಇನ್ನು ಕಲಿಬೇಕಾಗಿದ್ದು ತುಂಬಾ ಇದೆ. ಈ ಶಾಲೆ ಮತ್ತು ಈ ಜಿಲ್ಲೆ ನನಗ್ಯಾವುದು ಕೊರತೆ ಮಾಡಿಲ್ಲ ಒಬ್ಬ ಉತ್ತಮ ಶಿಕ್ಷಕನಾಗಿ ಪುರಸ್ಕರಿಸಿದೆ,  ನನ್ನೊಬ್ಬ ಕವಿ, ಸಾಹಿತಿಯಾಗಿ ನನ್ನನ್ನ ಅನೇಕ ವೇದಿಕೆಗಳಲ್ಲಿ ಸತ್ಕರಿಸಿ ಸನ್ಮಾನಿಸಿದೆ. ಸಂಪನ್ಮೂಲ ವ್ಯಕ್ತಿಯಾಗಿ ಗೌರವಿಸಿದೆ. ಪ್ರತಿ ವಿಷಯದಲ್ಲೂ ನನ್ನ ಶಾಲೆ ನನ್ನ ಮಕ್ಕಳು ನಮ್ಮ ಪ್ರಾಂಶುಪಾಲರು ಶಿಕ್ಷಕರೂ ನನ್ನ ಜೊತೆಗಿದ್ದಾರೆ. 



ಈ ನಮ್ಮ KREIS ಸಂಸ್ಥೆಯು ನನ್ನನ್ನ ಆರ್.ಆಯ್.ಇ ಮೂಲಕ ತರಬೇತಿ ನೀಡಿ ರಾಜ್ಯ ಹಿಂದಿ ಭಾಷಾ ಸಂಪನ್ಮೂಲ ವ್ಯಕ್ತಿಯನ್ನಾಗಿ ಮಾಡಿದೆ, ಹಿಂದಿ ಭಾಷಾ ವಿಷಯದ ಲರ್ನಿಂಗ್ ಪ್ಯಾಕೆಜ್, ಮಾದರಿ ಪ್ರಶ್ನೆ ಪತ್ರಿಕೆ ತಯಾರಿಕೆ, ಹೀಗೆ ಸಂಘದ ಅನೇಕ ಕಾರ್ಯಗಳಲ್ಲಿ ನನ್ನನ್ನ ಒಬ್ಬ ಸದಸ್ಯನಾಗಿ ಗುರುತಿಸಿದೆ. ಸೆಟಲೈಟ ಮೂಲಕ ಡಿ.ಎಸ್.ಈ.ಆರ್.ಟಿ ಸ್ಟುಡಿಯೋದಲ್ಲಿ ಟೆಲಿ ಕಾಂಪ್ರೆನ್ಸ್ ಮೂಲಕ ತರಬೇತಿ ನೀಡಿಲು ಅವಕಾಶ ಮಾಡಿಕೊಟ್ಟಿದೆ. 


ಆದರಂತೆ ನಮ್ಮ ಕರ್ನಾಟಕ ರಾಜ್ಯ ಕರ್ನಾಟಕ ವಸತಿ ಶಿಕ್ಷಣ ವಸತಿ ಶಾಲೆಗಳ ನೌಕರರ ಸಂಘವು ನನ್ನನ್ನ ಗುರುತಿಸಿ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಮಾಡಿ  ಜವಾಬ್ದಾರಿ ಕೊಟ್ಟಿದೆ. ಇವೆಲ್ಲವುಗಳಿಗೆ ನಾನು ಎಷ್ಟರ ಮಟ್ಟಿಗೆ ನ್ಯಾಯ ಒದಿಸಿದ್ದೆನೋ ನನಗೆ ಗೊತ್ತಿಲ್ಲ, ಇಷ್ಟು ಮಾತ್ರ ಸತ್ಯ ಕಾಯಾ, ವಛಾ, ಮನಸ್ಸಿನಿಂದ ನಾನು ಯಾವತ್ತಿಗೂ  ಕರ್ತವ್ಯ ಮಾಡುವೆ ಎಂದು ಹೇಳಬಲ್ಲೆ.


. ಈ ಹತ್ತು ವರ್ಷಗಳ ದೀರ್ಘಾವಧಿಯ ಸೇವೆಯಲ್ಲಿ ಪ್ರತಿ ದಿನಗಳು ನನಗೆ ತುಂಬಾ ಪಾಠಗಳು ಕಲಿಸಿವೆ. ಅದೇನೆ ಇರಲಿ ಈ ನನ್ನ ಸೇವೆಯಲ್ಲಿ ತಿಳದೋ ತಿಳಿಯದೋ ನನ್ನಿಂದಲು ತಪ್ಪುಗಳು  ಆಗಿರಬಹುದು ಆ ತಪ್ಪು ಗಳನೆಲ್ಲ ಮನ್ನಿಸಿ ಸದಾ ನನ್ನ ಏಳಿಗೆ ಬಯಸಿದ ನನ್ನ ತಂದೆ-ತಾಯಿಯರಿಗೆ, ಬಂದು ಬಾಂಧವರಿಗೆ, ಆತ್ಮೀಯ ಸ್ನೇಹಿತರಿಗೆ, ಸದಾ ಲ್ಯಾಪ್ ಟಾಪ್ ಮೋಬೈಲಿಗೆ ಅಂಟಿಕೊAಡಿರುವ ನನ್ನ ಇಲ್ಲಿಯವರೆಗೂ ಸಹಿಸಿಕೊಂಡು ನನ್ನ ಪ್ರತಿ ಕಾರ್ಯದಲ್ಲು ನನ್ನ ಜೊತೆ ನಿಂತ ನನ್ನ ಮಡದಿ ಮಕ್ಕಳಿಗೆ. ನನಗೆ ಅನ್ನಕೊಟ್ಟು ಸುಂದರ ಬದುಕು ಕಟ್ಟಿಕೊಟ್ಟು ಇಷ್ಟೆಲ್ಲಾ ನನ್ನ ಬೆಳಸಿ ಗುರುತಿಸಿದ ನನ್ನ ಹೆಮ್ಮೆಯ KREIS ಸಂಸ್ಥೆಗೆ ಕೃತಜ್ಞತೆಗಳನು ಅರ್ಪಿಸದೆ ಇರಲಾರೆನು.

ನನ್ನಿಂದೆನಾರು ತಪ್ಪಾಗಿದ್ದರೆ ಕ್ಷಮೆಯಾಚಿಸುತ್ತಾ ೧೦ ವರ್ಷದ ಈ ಸೇವಾವಧಿಯಲ್ಲಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಜೀವನಪೂರ್ತಿ ಆಭಾರಿಯಾಗಿರುವೆ.

ಇಂತಿ ನಿಮ್ಮವ

ಬಸವರಾಜ ಭೂತಿ. ಹಿಂದಿ ಭಾಷಾ ಶಿಕ್ಷಕರು
















School Photos

 

ಬರದ ಬರೆ

  ಮೊನ್ನೆ ಶನಿವಾರ ಅರ್ಧ ದಿನದ ಶಾಲೆ ಮುಗಿಸಿ,  ಬಸ್ಸತ್ತಿ  ಊರ ಕಡೆಗೆ ಹೊರಟೆ. ನನ್ನೂರಿಗೆ ಹೋಗದೆಯು ತುಂಬಾ ದಿನಗಳಾಗಿತ್ತು. ಹೋಗುವ ದಾರಿ ಮಧ್ಯ ಮಧ್ಯದಲ್ಲಿ ಅಲ್ಲಲ್ಲಿ ಬ...