Skip to main content

Posts

Showing posts from 2024

KRCRS ಶಾಲೆ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆ.

  KRCRS ಶಾಲೆ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆ. ಅಲ್ಮೆಲ್ ತಾಲೂಕಿನ ವಿಭೂತಿಹಳ್ಳಿ ಕಿತ್ತೂರ್ ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿಯರು ಬಾಲಕಿಯರ ವಾಲಿಬಾಲ್ ತಂಡ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿದೆ.        ಸಿಂದಗಿಯ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ತಾಲೂಕಾ ಮಟ್ಟದ ಪ್ರೌಢಶಾಲಾ ವಿಭಾಗದ ವಾಲಿಬಾಲ್ ಪಂದ್ಯಾವಳಿಯಲ್ಲಿ ಅಲ್ಮೆಲ್ ತಾಲೂಕಿನ ವಿಭೂತಿಹಳ್ಳಿ ಕಿತ್ತೂರ್ ರಾಣಿ ಚೆನ್ನಮ್ಮ ವಸತಿ ಶಾಲೆಯ  ಬಾಲಕಿಯರ ತಂಡ ಫೈನಲ್ ಪಂದ್ಯದಲ್ಲಿ ತಮ್ಮ ಕ್ರೀಡಾ ಕೌಶಲ್ಯ, ಕಸರತ್ತಿನೊಂದಿಗೆ ಹೊಂದಾಣಿಕೆಯುತ, ರೋಚಕ ರೀತಿಯಲ್ಲಿ ಆಟವನ್ನಾಡಿ ಗೆಲುವು ಸಾಧಿಸಿದೆ. ಕೂಟದಲ್ಲಿ ಪ್ರಥಮ ಸ್ಥಾನದೊಂದಿಗೆ  ಪ್ರಶಸ್ತಿ ಪಡೆದು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಪ್ರವೇಶ ಪಡೆದಿದೆ.     ಪಂದ್ಯಾವಳಿಯಲ್ಲಿ ಉತ್ತಮ ಸಾಧನೆ ತೋರಿ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಈ ತಂಡಕ್ಕೆ ಶಾಲೆಯ ಪ್ರಾಂಶುಪಾಲರಾದ ಶ್ರೀ ಪ್ರಭಾಕರ್ ಪಾಟೀಲ್, ದೈಹಿಕ ಶಿಕ್ಷಕರಾದ ಈಶ್ವರ್ ಬಿರಾದಾರ ಟೀಮ್ ಮ್ಯಾನೇಜರ್ ಬಸವರಾಜ್ ಭೂತಿ, ಶ್ರೀ ಧರೆಪ್ಪ ಬಿರಾದಾರ್ ಹಾಗೂ ಶಾಲೆಯ ಸರ್ವ  ಸಿಬ್ಬಂದಿ ವರ್ಗ ಅಭಿನಂದಿಸಿ ಶುಭ ಹಾರೈಸಿದ್ದಾರೆ

ಯಾದ್(ನೆನಪಪರ್ವತ)ಗಿರಿ

  ಯಾದ್(ನೆನಪಪರ್ವತ)ಗಿರಿ    ವಿದಾಯ ಹೇಳಿ ಹೋಗುತ್ತಿದ್ದೇನೆ  ನಾನು ನನ್ನೂರಿಗೆ ಇಂದು| ಹನ್ನೊಂದು ವರ್ಷಗಳ ಕಾಲ  ನಿಮ್ಮ ಪ್ರೀತಿಯಲಿ ಮಿಂದು|| ಊರೂರು ಅಲಿವಾಗ ನೆಲೆಕೊಟ್ಟ ಊರು, ಕೊಟ್ಟಿತು ಇರಲೊಂದು ನೆಮ್ಮದಿಯ ಸೂರು ಬಿಟ್ಟು ಹೋಗೋಕೆ ಆಗ್ತಿಲ್ಲ ಮನಸ್ಸಿಗೆ ಬೇಜಾರು ಒಂದಿನವೂ ನೆನೆಯದಂತೆ ಇರಿಸಿತು ತವರು. ಆಗಿಲ್ಲ ಕೊರತೆ ಇಲ್ಲಿ ಯಾವುದು ಒಂಚೂರು  ಬೇಶ್ !.. ಎಂದು ಬೆನ್ನು ತಟ್ಟಿತು ಶಹಾಪುರ ಸೈ ಎಂದು ಮೈಗೆ ಹೊದಿಸಿತು ಶಾಲು-ಹಾರು. ಬಿರುದು ಬಾವಲಿ ಕೊಟ್ಟು ಹರಸಿತು ನೂರಾರು  ಒಮ್ಮೆಯೂ ಮಾಡದೆ ತಂಟೆ ತಕರಾರು ವರ್ಗಾವಣೆ ಸುದ್ದಿ ಹಬ್ಬಿತು ಎಲ್ಲೆಡೆ ಪುಕಾರು ಕರೆಮಾಡಿ ವಿಚಾರಿಸಿದರು ಆಪ್ತರೆಲ್ಲರು  "ಯಾಕೆ ಹೋಗುವೆ ಭೂತಿ"  ಇಲ್ಯಾಕೆ ಬೇಜಾರು ಬಂದು ಬೀಡು ಸುಮ್ಮನೆ ಮಾಡದೆ ತಕರಾರು ಅಂದಾಗ ತುಂಬಿ ಬಂತು ಕಣ್ಣಾಲಿಗಳಲ್ಲಿ ನೀರು  ಮನಸ್ಸು ಗಟ್ಟಿಮಾಡಿ ಕಳಚಿಕೊಂಡೆ ಕೊಂಡಿ ಶಹಾಪುರು  ಕೈಲಿಡಿದು ಬಂದೆ ಖುಷಿಯಲಿ ಟ್ರಾನ್ಸ್ಫರ್ ಆರ್ಡರು  ಕಾಂಪೌಂಡು ಒಳಬರುತಲಿ ತಲ್ಲಣಿಸತು ಹೃದಯ ಜೋರು ಮುಗ್ಧ ಮಕ್ಕಳು "ಸರ್" ಎಂದಾಗ ಕರಗಿ ನಿರಾಯಿತು ಕಣ್ಣೀರು  ಮೂಕ ವಿಸ್ಮಿತನಾಗಿ ನಿಂತೆ ಏನು ಹೇಳಿದೆ ಒಂಚೂರು ನಾನೆಲ್ಲೂ ಹೋಗಲ್ಲ ಮಕ್ಕಳೇ ನಂದಿಲ್ಲೇ ಪಕ್ಕದೂರು  ಆಗಾಗ ಬರುವೆ ಪಾಠ ಹೇಳಲು ಆಗದಿರಿ ನೀವು ಬೇಜಾರು ತಂದು ಕೊಟ್ಟಿದೆ ನನಗೆ ಯಾದಗಿರಿ ಸಾಕಷ್ಟು ಹೆಸರು  ಮರೆಯುವುದಿಲ್ಲ ನಾನೆಂದಿಗೂ ಜೀವನದಲಿ ಇರುವರಿಗೂ ಉಸಿರು ಹೊತ್ತು ಸಾಗುತ್

ಕಣ್ಮನಸೆಳೆಯುವ ಕಲ್ಯಾಣಿ ಏವೂರ

  ಸಿಂ ದಗಿ ಹಾಗೂ ಶಹಾಪುರಕ್ಕೆ ಸುಮಾರು 12 ವರ್ಷದಿಂದ ಅಲೆದಾಡುತಿದ್ದೇನೆ. ಕಾರಣ ನನ್ನ ಶಿಕ್ಷಕ ವೃತ್ತಿ. ಬಸ್ಸಲ್ಲಿ ಕುಳಿತಾಗ ಹೀಗೆ ಹಲವರ ಬಾಯಿಂದ ಕೇಳಿದ್ದೆ,  ಏವೂರು ಗ್ರಾಮದಲ್ಲಿ ಕಲ್ಯಾಣಿ ಚಾಲುಕ್ಯರ ಕಾಲದ ಪುರಾತನ ದೇವಾಲಯಗಳು, ಶಾಸನಗಳು ಹಾಗೂ ಸುಂದರವಾದ ಕಲ್ಯಾಣಿ ಇದೆ ಎಂದು.ಆದರೆ ಇದುವರೆಗೂ ನೋಡಿರಲಿಲ್ಲ. ನೋಡುವ ಕುತೂಹಲ ಮನದಲ್ಲಿದ್ದರೂ, ಅಷ್ಟೇ ಸುಮಾರಾಗಿ ಇರಬಹುದೆನೊ ಅಂದುಕೊಂಡು ನಿರ್ಲಕ್ಷಿಸಿದ್ದೆ.  ಮೊನ್ನೆ ಬಕ್ರೀದ್ ಹಬ್ಬದ ನಿಮಿತ್ಯ ಶಾಲೆಗೆ ರಜೆ ಇದ್ದ ಕಾರಣ ಕುಟುಂಬ ಸಮೇತ ಮೋಟರ್ ಸೈಕಲ್ ಹತ್ತಿ ಊರ ಕಡೆಗೆ ಹೊರಟಿದ್ದೆವು. ಏವೂರ ಸಮಿಪಿಸುತಿದ್ದಂತೆ  ನಮ್ಮಾಕೆಗೆ ಕೇಳಿದೆ; "ಇಲ್ಲೊಂದು ಸುಂದರವಾದ ಪುರಾತನ ಕಲ್ಯಾಣಿ ಇದೆಯಂತೆ ನೋಡೋಣ" ಎಂದು. ಅವಳು ಒಮ್ಮೆಲೆ, ನನ್ನ ಮಾಕ್ಕಳಂದಿಗೆ ಆಯ್ತು ಎಂದು ತಲೆ ಆಡಿಸಿದಳು. ಪೂರಾತನ ದೇವಾಲಯದ ಕಡೆಗೆ ಹೋಗಲು ದಾರಿ ಗೊತ್ತಿರಲಿಲ್ಲ. ಪಕ್ಕದಲ್ಲಿದ್ದ ಸಿಸಿ ರಸ್ತೆಯ ಕಡೆಗೆ ನನ್ನ ಗಾಡಿ ಹೊರಳಿಸಿ,  ಪಕ್ಕದಲ್ಲಿ ನಿಂತಿದ್ದ ಊರಿನ ಹಿರಿಯರೊಬ್ಬರಿಗೆ ದೇವಾಲಯಕೆ ಹೋಗಲು ದಾರಿ ಕೇಳಿದೆ. ಆಗವರು "ಇದೇ ಸಿಸಿ ರಸ್ತೆ ಹಿಡಿದು ಸ್ವಲ್ಪ ಮುಂದೆ ಹೋಗಿ ಎಡಗಡೆಗೆ ಹೊರಳಿರಿ, ಮುಂದೆ ದೇವಸ್ಥಾನ ಕಾಣುತ್ತದ" ಎಂದರು. ಅವರಿಗೆ ಧನ್ಯವಾದ ತಿಳಿಸಿ.  ದೇವಾಲಯದ ಕಡೆಗೆ ಹೊರಟೆ. ಒಂದೆರಡು ತಿರುವು ದಾಟಿ ಹೋಗುವಷ್ಟರಲ್ಲಿ ಹಾಳು ಬಿದ್ದ ದೇವಾಲಯದ ಮಹದ್ವಾರದ ಸುಂದರ ನೋಟ ಎದುರಿಗೆ ಕಾಣಿಸಿತು