Skip to main content

ಕಣ್ಮನಸೆಳೆಯುವ ಕಲ್ಯಾಣಿ ಏವೂರ

 ಸಿಂದಗಿ ಹಾಗೂ ಶಹಾಪುರಕ್ಕೆ ಸುಮಾರು 12 ವರ್ಷದಿಂದ ಅಲೆದಾಡುತಿದ್ದೇನೆ. ಕಾರಣ ನನ್ನ ಶಿಕ್ಷಕ ವೃತ್ತಿ. ಬಸ್ಸಲ್ಲಿ ಕುಳಿತಾಗ ಹೀಗೆ ಹಲವರ ಬಾಯಿಂದ ಕೇಳಿದ್ದೆ,  ಏವೂರು ಗ್ರಾಮದಲ್ಲಿ ಕಲ್ಯಾಣಿ ಚಾಲುಕ್ಯರ ಕಾಲದ ಪುರಾತನ ದೇವಾಲಯಗಳು, ಶಾಸನಗಳು ಹಾಗೂ ಸುಂದರವಾದ ಕಲ್ಯಾಣಿ ಇದೆ ಎಂದು.ಆದರೆ ಇದುವರೆಗೂ ನೋಡಿರಲಿಲ್ಲ. ನೋಡುವ ಕುತೂಹಲ ಮನದಲ್ಲಿದ್ದರೂ, ಅಷ್ಟೇ ಸುಮಾರಾಗಿ ಇರಬಹುದೆನೊ ಅಂದುಕೊಂಡು ನಿರ್ಲಕ್ಷಿಸಿದ್ದೆ. 

ಮೊನ್ನೆ ಬಕ್ರೀದ್ ಹಬ್ಬದ ನಿಮಿತ್ಯ ಶಾಲೆಗೆ ರಜೆ ಇದ್ದ ಕಾರಣ ಕುಟುಂಬ ಸಮೇತ ಮೋಟರ್ ಸೈಕಲ್ ಹತ್ತಿ ಊರ ಕಡೆಗೆ ಹೊರಟಿದ್ದೆವು. ಏವೂರ ಸಮಿಪಿಸುತಿದ್ದಂತೆ  ನಮ್ಮಾಕೆಗೆ ಕೇಳಿದೆ; "ಇಲ್ಲೊಂದು ಸುಂದರವಾದ ಪುರಾತನ ಕಲ್ಯಾಣಿ ಇದೆಯಂತೆ ನೋಡೋಣ" ಎಂದು. ಅವಳು ಒಮ್ಮೆಲೆ, ನನ್ನ ಮಾಕ್ಕಳಂದಿಗೆ ಆಯ್ತು ಎಂದು ತಲೆ ಆಡಿಸಿದಳು. ಪೂರಾತನ ದೇವಾಲಯದ ಕಡೆಗೆ ಹೋಗಲು ದಾರಿ ಗೊತ್ತಿರಲಿಲ್ಲ. ಪಕ್ಕದಲ್ಲಿದ್ದ ಸಿಸಿ ರಸ್ತೆಯ ಕಡೆಗೆ ನನ್ನ ಗಾಡಿ ಹೊರಳಿಸಿ,  ಪಕ್ಕದಲ್ಲಿ ನಿಂತಿದ್ದ ಊರಿನ ಹಿರಿಯರೊಬ್ಬರಿಗೆ ದೇವಾಲಯಕೆ ಹೋಗಲು ದಾರಿ ಕೇಳಿದೆ. ಆಗವರು "ಇದೇ ಸಿಸಿ ರಸ್ತೆ ಹಿಡಿದು ಸ್ವಲ್ಪ ಮುಂದೆ ಹೋಗಿ ಎಡಗಡೆಗೆ


ಹೊರಳಿರಿ, ಮುಂದೆ ದೇವಸ್ಥಾನ ಕಾಣುತ್ತದ" ಎಂದರು. ಅವರಿಗೆ ಧನ್ಯವಾದ ತಿಳಿಸಿ.  ದೇವಾಲಯದ ಕಡೆಗೆ ಹೊರಟೆ. ಒಂದೆರಡು ತಿರುವು ದಾಟಿ ಹೋಗುವಷ್ಟರಲ್ಲಿ ಹಾಳು ಬಿದ್ದ ದೇವಾಲಯದ ಮಹದ್ವಾರದ ಸುಂದರ ನೋಟ ಎದುರಿಗೆ ಕಾಣಿಸಿತು. ದೇವಾಲಯದ ಎದುರಿಗೆ ಹೋಗಿ ಗಾಡಿ ತರುಬಿ ನಿಲ್ಲಿಸಿದೆ. 

ಕಲ್ಯಾಣಿ

ದೇವಾಲಯದ ಮುಂದೆ ವಿಶಾಲವಾಗಿ ಹರಡಿ ಬೆಳೆದು ನಿಂತಿದ್ದ ಆಲದ ಮರ ಅಲ್ಲಿನ ದೊಡ್ಡ ದೊಡ್ಡ ಕಲ್ಲಕಟ್ಟೆಯನ್ನು ತನ್ನ ನೆರಳಿಂದ ಆವರಿಸಿ ತಂಪಾಗಿಸಿತ್ತು. ಹೀಗಾಗಿ ಬಿಸಿಲಿಗೆ ಬಳಲಿ ಬಂದವರಿಗೆ ಕೂಡಲು ಆ ಜಾಗ ಹಿತವಾಗಿತ್ತು. ಅದಕ್ಕೆ ಎನೋ... ಊರ ಹಿರಿಯ, ಕಿರಿಯರ ದಂಡೇ.. ಅಲ್ಲಿ ಬಿಡಾರ ಹೂಡಿ, ವಿಶ್ರಾಂತಿ ಪಡೆಯುತ್ತಿತ್ತು. 

ಗಾಡಿಯಿಂದ ಇಳಿದು ಆ ಕಡೆ, ಈ ಕಡೆ ನೋಡಿದೆ. ಊರಿನ ಕೇಲವು ಜನ ದೇವಸ್ಥಾನದ ಕಟ್ಟಿಯ ಮೇಲೆ ಕುಳಿತು ವಿಶ್ರಾಂತಿ ಪಡೆಯುತ್ತಿದ್ದು ಬಿಟ್ಟರೆ ಬೇರೆ ಯಾರು  ದೇವಸ್ಥಾನ ನೋಡಲು ಬಂದವರು ಅಲ್ಲಿ ಕಾಣಿಸಲಿಲ್ಲ. ದೇವಸ್ಥಾನದ ಒಳಗೆ ಹೋಗುವುದೋ... ಬೇಡವೋ..ಅಂದುಕೊಳ್ಳುತ್ತಾ. ಸ್ವಲ್ಪ ಹೋತ್ತು ಅಲ್ಲೇ ನಿಂತೆ. 


ಕಟ್ಟಿಯ ಮೇಲೆ ಕುಳಿತಿದ್ದವರಿಗೆ ನಾವು ಹೊಸಬರೆಂಬುದು ಗೊತ್ತಾಗಿ, ದುರಗುಟ್ಟಿ ನಮ್ಮನ್ನೇ ನೋಡುತ್ತಿದ್ದದ್ದರು. "ಇಲ್ಲಿ ಯಾರು ಬರಲ್ಲ ಇವನ್ಯಾರಪ್ಪ ಕುಟುಂಬ ಕರಕೊಂಡು ಬಂದಿರೋನು, ಇಲ್ಲೆನು ಅಂತಾ ಮಹಾ ಇದೆ ಅಂತ" ಅವರು ಮನಸಗಸಲ್ಲಿ ಅಂದರು ಅಂದುಕೊಂಡಿರಬಹುದೆನೋ.. 

ಇಲ್ಲಿಯವರೆಗೆ ಬಂದು ಹಾಗೆ ಹೋಗುವುದು ಬೇಡವೆಂದು ತಿಳಿದು. ಅಲ್ಲಿ ಕುಳಿತಿದ್ದವರ ಕಡೆಗೆ ನೋಡಿಯೂ ನೋಡದಂತೆ. ವಲ್ಲದ ಮನಸ್ಸಿಂದ, ನನ್ನ ಪರಿವಾರ ಜೋತೆ ಸ್ವಲ್ಪ ಆತಂಕದಲ್ಲಿಯೆ ದೇವಾಲಯದೊಳಗಡೆ ಹೆಜ್ಜೆ ಹಾಕಿದೆ. 

ದೇವಸ್ಥಾನದ ಒಳಗೆ ಹೋಗುತ್ತಿದ್ದಂತೆ ದೊಡ್ಡ ದೊಡ್ಡ ಕಲ್ಲಿನ ಕಂಬಗಳು, ಮೇಲ್ಚಾವಣಿಗಳು ಕಂಡವು. ದೇವಾಲಯದ ಒಳಗೂ ಕಲ್ಲಿನ ತಂಪಾದ ಹಾಸಿಗೆಯ ಮೇಲೆ ಮಲಗಿ ಕೆಲವರು ವಿಶ್ರಾಂತಿ ಪಡೆಯುತ್ತಿದ್ದು ಕಂಡು ಬಂತು. ಯಾರಿಗೂ ಮಾತಾಡ್ಸದೆ ಸುಮ್ಮನೆ ಕಲ್ಯಾಣಿ ಕಡೆಗೆ ಹೊರಟೆವು.  

ಬಹಳ ದಿನಗಳಿಂದ ಹೂಳು ತೆಗೆಯದೆ ಸುಂದರವಾದ ಕಲ್ಯಾಣಿ ಕಪ್ಪೆ ಹಾಸ್ಕಟ್ಟಿ, ಸ್ವಚ್ಛತೆಗಾಗಿ ಹಾತೋರೆದು ಕುಳಿತಂತೆ ಕಾಣುತ್ತಿತ್ತು. ಎದುರಿಗೆ ಒಂದಿಷ್ಟು ಜನ ಹುಡುಗರು ನೀರೊಳಗೆ ಕಲ್ಲು ಎಸೆಯುತ್ತ ಆಟವಾಡುತ್ತಿದ್ದರು. 


ಆ ವಿಶಾಲ ಕಲ್ಯಾಣಿ ನೋಡಲು ಬಲು ಸುಂದರವಾಗಿತ್ತು. ಆ ಕಲ್ಯಾಣಿಯ ಕಲ್ಲಿನ ಗೋಡೆಯ ಸುತ್ತಲು ಕೆತ್ತಿದ ಅನೇಕ ಕಲಾಕೃತಿಗಳು ಸೂಕ್ಷ್ಮ ಕೆತ್ತನೆಗೆ ಸಾಕ್ಷಿಯಾಗಿದ್ದವು. ನೋಡಲು ಕಣ್ಮನ ಸೆಳೆಯುತಿದ್ದ ಕಲ್ಯಾಣಿಯಲ್ಲಿ ತುಸು ಹೊತ್ತು ನಿಂತು. ನನ್ನ ಮೊಬೈಲ್ ಕ್ಯಾಮೆರಾದ ಕಣ್ಣಿಗೆ ಹಬ್ಬವಾದೆವು.


ಇಷ್ಟೊಂದು ಸುಂದರವಾದ ದೇವಾಲಯ ಹಾಗೂ ಕಲ್ಯಾಣಿಯ ಕುರಿತು ತಿಳಿಯಲು ಉಸ್ತುಕನಾಗಿ ಗೂಗಲ್ ಸರ್ಚ್ ಮಾಡಲು ಮುಂದಾದೆ.  ಗೂಗಲ್ ನನಗೆ ಅಲ್ಪಸ್ವಲ್ಪ ಮಾಹಿತಿ ಒದಗಿಸಿ ಕೊಟ್ಟಿತು. 


11 ರಿಂದ 12 ನೇ ಶತಮಾನದಲ್ಲಿ ಈ ಭಾಗವನ್ನು ಆಳಿದ ಕಲ್ಯಾಣಿ ಚಾಲುಕ್ಯರ 2 ಮತ್ತು ಕಳಚೂರಿ ಅರಸರ 2 ಶಾಸನಗಳು ಅಲ್ಲದೇ ಇನ್ನು ಅನೇಕ ಶಾಸನಗಳು ಇಲ್ಲಿ ಲಭಿಸಿವೆಯಂತೆ. ಅಲ್ಲಲ್ಲಿ ಸ್ವಲ್ಪ ಬಿಟ್ಟು  ಎಲ್ಲಾ ಸುಸ್ಥಿತಿಯಲ್ಲಿರುವುದು ವಿಶೇಷ. ಧಾರ್ಮಿಕ, ಶೈಕ್ಷಣಿಕ ಹಾಗೂ ಸಂಸ್ಕøತಿಕ ಸಮೃದ್ಧ ಕೇಂದ್ರವಾಗಿತ್ತೆಂದು ಗೂಗಲ್ ಮೂಲಕ ತಿಳಿದುಕೊಂಡೆ. ಇಂದಿಗೂ ಕಣ್ಮನಸೆಳೆಯುವ ಚಿತ್ತಾಕರ್ಷಕ ಶಿಲ್ಪಕಲೆ, ಸ್ಥಂಭಾಕಾರದ ಶಾಸನಗಳು, ಬಹುಕೋನಗಳಲ್ಲಿ ನಿರ್ಮಿಸಲಾದ ವಾಸ್ತುಶಿಲ್ಪಗಳುಳ್ಳ, ಮಂದಿರಗಳು, ಬಸದಿಗಳು, ಮೂರ್ತಿಗಳು ಒಳಗೊಂಡ ಸೋಮೇಶ್ವರ- ಸಂಗಮೇಶ್ವರ ದೇವಸ್ಥಾನಗಳು, ಶಿವ ಪಾರ್ವತಿಯರ,ವಿಷ್ಣು, ಗರುಡ, ಸರ್ಪ ಸೇರಿದಂತೆ ವೈವಿಧ್ಯಮಯ ದೇವತೆಗಳಮೂರ್ತಿಗಳು, ನೋಡಿದಷ್ಟು ನೋಡುತ್ತಲೇ ಇರಬೇಕೆಂಬ ಮನದಣಿಯದ, ಕಣ್ಮನ ಸೆಳೆಯುವ ಅಪೂರ್ವ ಶಿಲ್ಪಕಲೆಗಳು ಗ್ರಾಮದಲ್ಲಿ ಇವೆ. 

ಅಲ್ಲಿ ಇಲ್ಲಿ ಮುರಿದುಬಿದ್ದ ಕಂಬಗಳು, ನೆಲದಲ್ಲಿ ಹೂತುಹೋದ ಮೂರ್ತಿಗಳು ಕಂಡು ಇಂತಹ ಪುರಾತನವಾದ ದೇವಾಲಯದ ಮೇಲೆ ಇನ್ನು ಯಾಕೆ ಪ್ರವಾಸ ಉದ್ಯಮ ಇಲಾಖೆಯ ಕಣ್ಣು ಬಿದ್ದಿಲ್ಲ ಅನಿಸಿತು. ಬಿದ್ದರೂ ಇದರ ರಕ್ಷಣೆಗೆ ಇನ್ನೂ ಯಾಕೆ ಧಾವಿಸಿಲ್ಲ ಅನ್ನು ಅನುಮಾನ ಕಾಡಿತು. ಈ ಸ್ಥಳವನ್ನು ಅಭಿವೃದ್ಧಿಗೊಳಿಸಿ, ಪ್ರವಾಸಿ ಸ್ಥಾನವಾಗಿ ಮಾಡಿದರೆ ಇಲ್ಲಿನ ನೂರಾರು ಜನರಿಗೆ ಉದ್ಯೋಗವು ಸಿಗುವುದರ ಜೊತೆಗೆ ನಮ್ಮ ಪೌರಾಣಿಕ ಕಲಿಯನ್ನು ಉಳಿಸಿಕೊಳ್ಳಬಹುದು ಎಂದು ಮನಸಲ್ಲಿ ಅಂದುಕೊಂಡೆ. ಈ ಸ್ಥಳಕ್ಕೆ ಸರಕಾರದ ರಕ್ಷಣೆಯ ಅವಶ್ಯಕತೆ ಇದೆ. ಇಲ್ಲದೆ ಹೋದರೆ ಅನೈತಿಕ ಚಟುವಟಿಕೆಗಳ ತಾಣವಾಗಬಹುದೆಂದು ತಿಳಿದು ಮಾನಸ್ಸಿಗೆ ಗಾಸಿಯಾಗಿ ಬೈಕು ಹತ್ತಿ, ಊರ ಕಡೆಗೆ ಹೊರಟಿವು.


************************

ಬಸವರಾಜ ಭೂತಿ.  ಶಿಕ್ಷಕರು, ಸಿಂದಗಿ

ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಬೇವಿನಹಳ್ಳಿ ಕ್ರಾಸ್ ಶಹಪುರ. ಜಿ. ಯಾದಗಿರಿ

Comments

Popular posts from this blog

ಶಿಕ್ಷಕ ಸೇವೆಗೆ ಸೇರಿ ಇಂದಿಗೆ 12 ವರುಷ

  ಶಿಕ್ಷಕ ಸೇವೆಗೆ ಸೇರಿ ಇಂದಿಗೆ ಹನ್ನೆರಡು ವರುಷ   ನನ್ನ ಸ್ಮೃತಿ ಪಟಲದಲ್ಲಿದಂತೆ 2011 ಇಸ್ವಿ ಡಿಸೆಂಬರ ತಿಂಗಳಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ನೇಮಕಾತಿಯ ತಾತ್ಕಾಲಿಕ ಆಯ್ಕೆ  ಪಟ್ಟಿ ಪ್ರಕಟಗೊಂಡಿತ್ತು. ನಾನಾಗ ಸುಣಗಾರ ಪಿಯು ಕಾಲೇಜನಲ್ಲಿ ಅರೆಕಾಲಿಕ ಉಪನ್ಯಾಸಕನಾಗಿ  ಹಾಗೂ ಆಲಮೇಲನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೆ. ಅಂದು ಫಲಿತಾಂಶದ ಸುದ್ದಿ ಕೇಳಿ, ಅಂದು  ಮಧ್ಯಾಹ್ನ ಶಾಲೆ(ಆಲಮೆಲ)ಯಿಂದ ಸಿಂದಗಿಗೆ ದೌಡಾಯಿಸಿ ಹೊರಟು ನಿಂತೆ.  ದಾರಿ ಮಧ್ಯ ಮಧ್ಯ ಮನಸ್ಸಿಗೆ  ಕಸಿವಿಸಿ ಅನಸಿದರು. ರಿಸಲ್ಟ್ ನೋಡುವ ಕೌತುಕ ಹೆಚ್ಚಾಗಿತ್ತು. ಎನಾದಿತು ಎನ್ನುವ ಭಯದಲ್ಲಿದ್ದ ನನಗೆ ಊರಿಗೆ ಬರುವಷ್ಟರಲ್ಲಿ ನನಗೆ ಶುಭ ಸುದ್ದಿಯೇ ಬರಮಾಡಿತು.   ಹೇಗೋ… ಎನೋ ನಾನರಿಯೆ ಆಯ್ಕೆಯಾದ ಸುದ್ದಿ ಊರತುಂಬಾ ಹಬ್ಬಿತ್ತು. ಸ್ನೇಹಿತರೆಲ್ಲರು ಬರುತ್ತಲೆ ಶುಭಾಶಯ ತಿಳಿಸಲಾರಂಬಿಸಿದರು. ನನಗೆ ಗೊತ್ತಿರದೆ ನಾನು ಕೆಟಗೆರಿ ಕೋಟಾದಡಿಯಲ್ಲಿ ಆಯ್ಕೆಯಾಗಿದ್ದೆ. ಈ ವಿಷಯ ಮೊದಲು ನನ್ನ ತಂದೆ ತಾಯಿಗೆ ತಿಳಿಸಬೇಕು ಅಂದುಕೊಂಡೆ. ಆದರೆ ಅವರು ಮನೆಯಲ್ಲಿ ಇರಲಿಲ್ಲ ದೂರದ ಮಹಾರಾಷ್ಟ್ರಕ್ಕೆ ದುಡಿಯಲೆಂದು ಹೋಗಿದ್ದರು. ಇವಾಗಿನ ಹಾಗೆ ಆಗ ಎಲ್ಲರಲ್ಲೂ ಮೋಬೈಲ್ ಹೆಚ್ಚು  ಇರಲಿಲ್ಲ ಹೀಗಾಗಿ ಅವರಿಗೆ ಸುದ್ದಿ ತಿಳಿಯಲು ತಡವಾಯಿತು. .    ತಾತ್ಕಾಲಿಕ ಆಯ್ಕೆ ಪಟ್ಟಿಯಾದ್ದರಿಂದ ಅಂತಿಮ ಆಯ್ಕೆ ಪಟ್ಟಿ ಬರುವರೆಗೂ ಹೆ

KRCRS ಶಾಲೆ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆ.

  KRCRS ಶಾಲೆ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆ. ಅಲ್ಮೆಲ್ ತಾಲೂಕಿನ ವಿಭೂತಿಹಳ್ಳಿ ಕಿತ್ತೂರ್ ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿಯರು ಬಾಲಕಿಯರ ವಾಲಿಬಾಲ್ ತಂಡ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿದೆ.        ಸಿಂದಗಿಯ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ತಾಲೂಕಾ ಮಟ್ಟದ ಪ್ರೌಢಶಾಲಾ ವಿಭಾಗದ ವಾಲಿಬಾಲ್ ಪಂದ್ಯಾವಳಿಯಲ್ಲಿ ಅಲ್ಮೆಲ್ ತಾಲೂಕಿನ ವಿಭೂತಿಹಳ್ಳಿ ಕಿತ್ತೂರ್ ರಾಣಿ ಚೆನ್ನಮ್ಮ ವಸತಿ ಶಾಲೆಯ  ಬಾಲಕಿಯರ ತಂಡ ಫೈನಲ್ ಪಂದ್ಯದಲ್ಲಿ ತಮ್ಮ ಕ್ರೀಡಾ ಕೌಶಲ್ಯ, ಕಸರತ್ತಿನೊಂದಿಗೆ ಹೊಂದಾಣಿಕೆಯುತ, ರೋಚಕ ರೀತಿಯಲ್ಲಿ ಆಟವನ್ನಾಡಿ ಗೆಲುವು ಸಾಧಿಸಿದೆ. ಕೂಟದಲ್ಲಿ ಪ್ರಥಮ ಸ್ಥಾನದೊಂದಿಗೆ  ಪ್ರಶಸ್ತಿ ಪಡೆದು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಪ್ರವೇಶ ಪಡೆದಿದೆ.     ಪಂದ್ಯಾವಳಿಯಲ್ಲಿ ಉತ್ತಮ ಸಾಧನೆ ತೋರಿ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಈ ತಂಡಕ್ಕೆ ಶಾಲೆಯ ಪ್ರಾಂಶುಪಾಲರಾದ ಶ್ರೀ ಪ್ರಭಾಕರ್ ಪಾಟೀಲ್, ದೈಹಿಕ ಶಿಕ್ಷಕರಾದ ಈಶ್ವರ್ ಬಿರಾದಾರ ಟೀಮ್ ಮ್ಯಾನೇಜರ್ ಬಸವರಾಜ್ ಭೂತಿ, ಶ್ರೀ ಧರೆಪ್ಪ ಬಿರಾದಾರ್ ಹಾಗೂ ಶಾಲೆಯ ಸರ್ವ  ಸಿಬ್ಬಂದಿ ವರ್ಗ ಅಭಿನಂದಿಸಿ ಶುಭ ಹಾರೈಸಿದ್ದಾರೆ

ಸರ್ವರಿಗೂ ಆಯುಧ ಪೂಜೆ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು

  ಬನ್ನಿ, ಸಂಬ್ರಮ...! ನಾನು ಚಿಕ್ಕವನಾಗಿದ್ದಾಗ ನಮ್ಮ ತಂದೆ-ತಾಯಿ ಬಳಿಯಲ್ಲಿ ಬೆಳೆದಿದಕಿಂತ ಹೆಚ್ಚು, ಆಯಿ ಮುತ್ಯಾನ ಹತ್ರ ಬೆಳೆದಿದ್ದೆ ಜಾಸ್ತಿ. ಆಗ ಅದೊಂದು ವಿಭಕ್ತ ಕುಟುಂಬ ಮನಿತುಂಬ ಮಕ್ಳು. ನವರಾತ್ರಿ ಹಬ್ಬ ಬಂದ್ರ ಸಾಕು ಸಂಭ್ರಮವೋ ಸಂಭ್ರಮ.  ಹಬ್ಬಕ್ಕಿಂತ ಮೂರನಾಲ್ಕ ದಿನ ಮೊದ್ಲ, ಮನೆ ಸ್ವಚ್ಚಿ ಮಾಡೋ ಮಾಡ್ಬೇಕಾಗ್ತಿತ್ತು. ಅದರಾಗ ಹೇಳಿ ಕೇಳಿ ಸಿಂದಗಿ ಊರಿಗಿ ನೀರಿನ ಬರ ಬ್ಯಾರೆ ಇತ್ತು. ನಾನು ಮತ್ತು ನನ್ನ ಸಣ್ಣಪ್ಪದೆರು ಹೆಚ್ಚು ಕಡಿಮೆ ವಾರಗೆವರೆ ಇದ್ದೆವು. ನಮ್ಮ ಕೆಲ್ಸಾ ಅಂದ್ರ  ಮನಿ ತುಂಬಾ ನೀರ ತುಂಬೊದು ಅಷ್ಟೇ. ಹಿಂಗಾಗಿ ಹಬ್ಬ ಹುಣ್ಣಿಮಿ ಬಂದ್ರ ನಮ್ಗ ಎಲ್ಲಿಲ್ಲದ ಸಂಕಟ ಸುರುವಾಗತಿತ್ತು. ಮನಿ ಮಂದಿಗೆಲ್ಲ ನೀರು ಈಡು ಮಾಡುವದು ಬರಗಾಲದಂತಹ ಊರಾಗ ಸಾಮಾನ್ಯ ಕೆಲಸ ಆಗಿರಲಿಲ್ಲ.            ಪೂಜಾರಿಗಳ ಓಣಿಯ ಹೆಗ್ಗೆರೆಪ್ಪನ ದೇವಸ್ಥಾನದ ಹತ್ರ ಇರುವ ಸೇದಿ ಬಾವಿ ಆಗ ಅರ್ಧ ಊರಿಗೆ ನೀರು ಕೊಡ್ತಿತ್ತು. ಹಿಂಗಾಗಿ ಅಲ್ಲಿ ಜನಜಂಗಳಿ ಜಾಸ್ತಿ ಇರುತ್ತಿತ್ತು. ಅದು ನಮ್ಮ ಮನೆಯಿಂದ ಒಂದು ಪರ್ಲಾಗ ದೂರದಲ್ಲಿತ್ತು. ಅದು ತಪ್ಪಿದರ ಮೂರನಾಲ್ಕ ಕಿಲೋ ಮೀಟರ್ ಗಟ್ಟಲೆ ಹ್ಯಾದರು ನೀರ ಸಿಗ್ತಿದಿಲ್ಲ. ನಸುಕಿನ್ಯಾಗ  ಪಾಳಿ ಕಡಿಮಿ ಇರತಾದಂತ ಮನ್ಯಾಗ ನಮ್ಮನ್ನ ನಾಲ್ಕು ಗಂಟೆಗೆ ಎಬ್ಬಿಸಿ, ನೀರ ತುಂಬಲಾಕ  ಕಳಿಸುತ್ತಿದ್ದರು.            ಇಬ್ಬರು ಚಿಕ್ಕಪ್ಪರದಾಗ ಒಬ್ಬ ನೀರು ಸೇದಿ ಕೊಡುತ್ತಿದ್ದ, ಇನ್ನೊಬ್ಬ ನನ್ಗ ಎದುರ ಬದರಾಗಿ ನೀರು ತಂದ