ಸಿಂ ದಗಿ ಹಾಗೂ ಶಹಾಪುರಕ್ಕೆ ಸುಮಾರು 12 ವರ್ಷದಿಂದ ಅಲೆದಾಡುತಿದ್ದೇನೆ. ಕಾರಣ ನನ್ನ ಶಿಕ್ಷಕ ವೃತ್ತಿ. ಬಸ್ಸಲ್ಲಿ ಕುಳಿತಾಗ ಹೀಗೆ ಹಲವರ ಬಾಯಿಂದ ಕೇಳಿದ್ದೆ, ಏವೂರು ಗ್ರಾಮದಲ್ಲಿ ಕಲ್ಯಾಣಿ ಚಾಲುಕ್ಯರ ಕಾಲದ ಪುರಾತನ ದೇವಾಲಯಗಳು, ಶಾಸನಗಳು ಹಾಗೂ ಸುಂದರವಾದ ಕಲ್ಯಾಣಿ ಇದೆ ಎಂದು.ಆದರೆ ಇದುವರೆಗೂ ನೋಡಿರಲಿಲ್ಲ. ನೋಡುವ ಕುತೂಹಲ ಮನದಲ್ಲಿದ್ದರೂ, ಅಷ್ಟೇ ಸುಮಾರಾಗಿ ಇರಬಹುದೆನೊ ಅಂದುಕೊಂಡು ನಿರ್ಲಕ್ಷಿಸಿದ್ದೆ. ಮೊನ್ನೆ ಬಕ್ರೀದ್ ಹಬ್ಬದ ನಿಮಿತ್ಯ ಶಾಲೆಗೆ ರಜೆ ಇದ್ದ ಕಾರಣ ಕುಟುಂಬ ಸಮೇತ ಮೋಟರ್ ಸೈಕಲ್ ಹತ್ತಿ ಊರ ಕಡೆಗೆ ಹೊರಟಿದ್ದೆವು. ಏವೂರ ಸಮಿಪಿಸುತಿದ್ದಂತೆ ನಮ್ಮಾಕೆಗೆ ಕೇಳಿದೆ; "ಇಲ್ಲೊಂದು ಸುಂದರವಾದ ಪುರಾತನ ಕಲ್ಯಾಣಿ ಇದೆಯಂತೆ ನೋಡೋಣ" ಎಂದು. ಅವಳು ಒಮ್ಮೆಲೆ, ನನ್ನ ಮಾಕ್ಕಳಂದಿಗೆ ಆಯ್ತು ಎಂದು ತಲೆ ಆಡಿಸಿದಳು. ಪೂರಾತನ ದೇವಾಲಯದ ಕಡೆಗೆ ಹೋಗಲು ದಾರಿ ಗೊತ್ತಿರಲಿಲ್ಲ. ಪಕ್ಕದಲ್ಲಿದ್ದ ಸಿಸಿ ರಸ್ತೆಯ ಕಡೆಗೆ ನನ್ನ ಗಾಡಿ ಹೊರಳಿಸಿ, ಪಕ್ಕದಲ್ಲಿ ನಿಂತಿದ್ದ ಊರಿನ ಹಿರಿಯರೊಬ್ಬರಿಗೆ ದೇವಾಲಯಕೆ ಹೋಗಲು ದಾರಿ ಕೇಳಿದೆ. ಆಗವರು "ಇದೇ ಸಿಸಿ ರಸ್ತೆ ಹಿಡಿದು ಸ್ವಲ್ಪ ಮುಂದೆ ಹೋಗಿ ಎಡಗಡೆಗೆ ಹೊರಳಿರಿ, ಮುಂದೆ ದೇವಸ್ಥಾನ ಕಾಣುತ್ತದ" ಎಂದರು. ಅವರಿಗೆ ಧನ್ಯವಾದ ತಿಳಿಸಿ. ದೇವಾಲಯದ ಕಡೆಗೆ ಹೊರಟೆ. ಒಂದೆರಡು ತಿರುವು ದಾಟಿ ಹೋಗುವಷ್ಟರಲ್ಲಿ ಹಾಳು ಬಿದ್ದ ದೇವಾಲಯದ ಮಹದ್ವಾರದ ಸುಂದರ ನೋಟ ಎದುರಿಗೆ ಕಾಣಿಸಿತು
Kitturu rani chennamma Residential School Almel