Saturday, October 31, 2020

ಕನ್ನಡ ರಾಜ್ಯೋತ್ಸವದ ಶುಭಾಶಯಗಳು

 

ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು


 ಎಂಥ ಚಂದ ಕರುನಾಡು

ಎಂಥ ಚಂದ, ಎಂಥ ಅಂದ ಕರುನಾಡು,

ಹಸಿರು ಸೀರೆಯುಟ್ಟು ಬೆಟ್ಟ ನಲಿತಾವ ನೋಡು |

ಎದ್ದು ಬಿದ್ದು ಓಡಿ ಆಡೋ ನದಿಗಳ ನೋಡು,

ಎಂಥ ಚಂದ ಗಂಧ ತಿಡಿದಂಗ ಜೇನು ಗೂಡು..||


ತೆಂಗು-ಕಂಗು, ಮಾವು-ಬೇವು ನೆಲ್ಲಿ ಹಲುಸು,

ಬೆಳಿದು ನಿಂತಾವ ನೋಡಿಲ್ಲಿ ಎಷ್ಟು ಹುಲುಸು..|

ನವಿಲು ಸಾರಂಗ ಹಕ್ಕಿ ಪಿಕ್ಕಿಗಳ  ಇದು ನೆಲೆಸು,

ನೋಡು ಬಾ ನಮ್ಮ ಕರುನಾಡು ಎಂಥಾ ಸೊಗಸು..||


ನಾಡು ಕೋಟೆ ಕಟ್ಟಿ ನಾವು ಇಲ್ಲಿ ಮೆರೆದೋರು

ಬಂಗಾರ ಬೆಳ್ಳಿ ನೆಲ ಹೊಕ್ಕು  ತೆಗೆದೊರು..|

ಕಲ್ಲಿನ್ಯಾಗ ಹೂ ಅರಳಿನಿಂತ ಪಟ್ಟದಕಲ್ಲು ಬೇಲೂರು,

ಶಿಲ್ಪಿ ಕಲೆಗಳಿಗೆ ಹೆಸರು,  ನಮ್ಮ ತವರೂರು..||


ಪ್ರೀತಿ ಸ್ನೇಹ ಹಂಚಿ ನಾವು ಇಲ್ಲಿ ಬಾಳೋರು, 

ಮತ ಪಂಥ ನಮಗಿಲ್ಲ, ಇಲ್ಲಿ ಎಲ್ಲಾರೂ ನಮ್ಮೊರು|

ಅಣ್ಣ ತಮ್ಮರಂತೆ ನಾವು ಕೂಡಿ ಬದುಕೋರು,

ಮಾನವೀಯತೆಯೊಂದೆ ಇಲ್ಲಿ ನಮಗೆ ಸೂರು..||


ನಮ್ಮ ನಾಡ ವೇಷ-ಭಾಷೆ ನಮಗೆ ಉಸಿರು,

ಸಾಹಿತ್ಯ ಸಂಸ್ಕೃತಿಗೆ ನಾವು ಎಂದು ಹೆಸರು..|

ತಾಯಿ ಸೇವೆ ಮಾಡಲೆಂದೇ ನಮ್ಮ ಉಸಿರು, 

ಎಲ್ಲರೂ ಸೇರಿ ಎಳೆಯೋಣ, ಕನ್ನಡಮ್ಮನ ತೇರು..||

+++++++++++++++++++++++++++++

ರಚನೆ:- ಬಸವರಾಜ ಭೂತಿ, 

ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ, ಬೇವಿನಹಳ್ಳಿ ಕ್ರಾಸ್ ಶಹಾಪುರ.

ಮೋ. ನಂ. 9900804567





No comments:

Post a Comment

School Photos

 

ಬರದ ಬರೆ

  ಮೊನ್ನೆ ಶನಿವಾರ ಅರ್ಧ ದಿನದ ಶಾಲೆ ಮುಗಿಸಿ,  ಬಸ್ಸತ್ತಿ  ಊರ ಕಡೆಗೆ ಹೊರಟೆ. ನನ್ನೂರಿಗೆ ಹೋಗದೆಯು ತುಂಬಾ ದಿನಗಳಾಗಿತ್ತು. ಹೋಗುವ ದಾರಿ ಮಧ್ಯ ಮಧ್ಯದಲ್ಲಿ ಅಲ್ಲಲ್ಲಿ ಬ...