Sunday, July 24, 2022

ಮಕ್ಕಳಾಟವು ಚಂದ ,ಮತ್ತೆ ಯೌವನ ಚಂದ

 ‘ಮಕ್ಕಳಾಟವು ಚಂದ ,ಮತ್ತೆ ಯೌವನ ಚಂದ


‘….. ಈ ಹಳೆಯ ಜಾನಪದ ಗೀತೆಯನ್ನು  ಮೂರೋ ಅಥವಾ ನಾಲ್ಕನೇ ತರಗತಿಯಲ್ಲಿ ಕೇಳಿದ ನೆನಪು ಈ ಜಾನಪದ ಮಕ್ಕಳ ಆಟದ ಚಂದವು ತಿಳಿಸುತ್ತದೆ ಅಲ್ವಾ..! ಹೀಗೆ ನಮ್ಮ ಸ್ನೇಹಿತನೊಬ್ಬ ಬೆಳಗ್ಗೆ ಮಕ್ಕಳನ್ನು ಕರೆದುಕೊಂಡು ಬಂದು ನಮ್ಮ ಶಾಲೆಯ ಮುಂದೆ ನಿಂತು ನನಗೆ ಕಾಲ್ ಮಾಡಿದ ಮಕ್ಕಳನ್ನು ಹೊರಗಡೆ ಕರೆದುಕೊಂಡು ಹೋಗಿ ಸುತ್ತಾಡಿಸಿಕೊಂಡು ಬರೋಣ ಬಾ ಎಂದು, ನಾನು ತಡ ಮಾಡದೆ ಮಕ್ಕಳನ್ನ ರೆಡಿ ಮಾಡಿಕೊಂಡು ಬಂದೆ ಒರಟು ನಿಂತೆ ನಮ್ಮ ಶಾಲೆಯ ಪಕ್ಕದ ಒಂದು ಪಾರ್ಮ ನಲ್ಲಿ. 

 ಇಂದಿನ ಯಾಂತ್ರಿಕ ಜೀವನದಲ್ಲಿ ಹೊರಾಂಗಣ ಆಟವನ್ನೇ ಮರೆತು. ಬರೀ ಟಿವಿ, ವಿಡಿಯೋ ಮೊಬೈಲ್ ಗೇಮ್ಸ್ ಇತ್ಯಾದಿಗಳಿಗೆ ಅಂಟಿಕೊಂಡಿದ್ದ ಮಕ್ಕಳಿಗೆ ಈವರೆಗಿನ ಪರಿಸರ ಕಂಡು ಖುಷಿಯಾಗುತ್ತಿತ್ತು. ಸುಮಾರು ಸುಮಾರು ಎಂಟು ಒಂಬತ್ತು ಮಕ್ಕಳು ಸೇರಿ ಆ ಪರಿಸರದಲ್ಲಿ ಕುಣಿದು ಕೊಪ್ಪಳಸಿದರು. ಶಾಲೆ ಮನೆ ಹೋಮಾರ್ಕುಗಳಲ್ಲಿ ಬಂದಿಯಾಗಿದ್ದ ಅವರು ಎಂದು ಸ್ವತಂತ್ರ ಪಕ್ಷಿಗಳಾಗಿದ್ದರು.

ಅವಿಭಕ್ತ ಕುಟುಂಬದ ಹಿರಿಯರ ಗರಡಿಯಲ್ಲಿ ಮುಟ್ಟಿಗೆ ತಿಂದು ಗಟ್ಟಿ ಮುಟ್ಟಾದ ನಮ್ಮ  ಮಕ್ಕಳಿಗೆ ಇಂದು ಪಿಜ್ಜಾ, ಬರ್ಗರ್, ಕುರುಕುರೆ, ಆಯಿಸ್ ಕ್ರೀಮ್, ಚಾಕಲೇಟ್ ತಿನಿಸಿ ಅಳ್ಳಿ ಪುರಿಯಾಗಿ ಮಾಡುತಿದ್ದೆವೆ. ಆಗ ಹಿರಿಯರಿದ್ದ ಮನೆಯಲ್ಲಿ ಪ್ರೀತಿ, ವಿಶ್ವಾಸವಿತ್ತು, ಸ್ನೇಹ, ಸಂಭಂದಗಳಿಗೆ ಬೆಲೆ ಇತ್ತು.. ಆದರೆ ಇಂದು ಪಟ್ಟಣದಲ್ಲಿ ಬೆಳೆದ ನಮ್ಮ ಮಕ್ಕಳಿಗೆ  ಅವಿಭಕ್ತ ಕುಟುಂಬ ಪ್ರೀತಿ ಮಕ್ಕಳಿಗೆ ಸಿಗುತ್ತಿಲ್ಲ, ಸಂಬಂಧಗಳ ಬಗ್ಗೆ ಅರಿವಿಲ್ಲ. 

ಇಗಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳನ್ನ ನಾವುಗಳು ಪುಸ್ತಕ ಹುಳುಗಳನ್ನಾಗಿ ಮಾಡುತ್ತಿದ್ದೇವೆ ಹೊರತು ಅವರನ್ನ ಮಕ್ಕಳಾಗಿ ನೋಡುತ್ತಿಲ್ಲ. ಒಣ ಗೌರವಕ್ಕಾಗಿ ಬಡಿದಾಡುತಿದ್ದೆವೆ. ಕಾನ್ವೆಂಟ್ ಶಾಲೆಗಲ್ಲಿ ಲಕ್ಷಾನುಗಟ್ಟಲೆ ಡೊನೇಷನ್ ನೀಡಿ ಅವರಿಗೆ ಒದಿಸುತಿದ್ದೆವೆ.  ಬರೀ ಓದು ಓದು ಮಕ್ಕಳಿಗೆ ಕಂಠ ಪಾಠ ಜೊತೆಗೆ ಹೋಮ್ ವರ್ಕ್ಸ್, ಒತ್ತಡ ಅವರಿಗೆ ಅವರ ಇಷ್ಟ ನಷ್ಟಗಳಿಗೆ ಬೆಲೆನೆ ಇಲ್ಲದೆ  ಸ್ವಾತಂತ್ರ್ಯ ಕಸಿದುಕೊಳ್ಳುತ್ತಿವೆ.  ಮಕ್ಕಳನ್ನು ಇತರೆ ಚಟುವಟಿಕೆಗಳಲ್ಲಿ ಗಮನ ಹರಿಸುತಿಲ್ಲ. ಬೇಕು ಬೇಡಗಳನ್ನು ಇಡೇರಿಸುವಲ್ಲಿ ಪಾಲಕರಾದ ನಮ್ಮ ಕರ್ತವ್ಯಗಳು ಮರೆತಿದ್ದೆವೆ. 

ದಿನವಿಡೀ ಕೆಲಸದ ಒತ್ತಡ ಇದ್ದಿದ್ದೆ, ವಾರಕ್ಕೆ ಒಂದು ಒಮ್ಮೆಯಾದರೂ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಮಕ್ಕಳ ಜೊತೆಗೆ ಬೆರೆಯ ಬೇಕು ಇಷ್ಟವಾದ ಸ್ಥಳಗಳಿಗೆ ಕರೆದುಕೊಂಡು ಹೋಗಬೇಕು. ತಿಂಗಳು ಒಮ್ಮೆಯಾದರೂ ಹಳ್ಳಿ ಕಡೆಗೆ ಹೋಗಿ ಅವರ ಅಜ್ಜ ಅಜ್ಜಿಯರ ಜೊತೆ ಬಿಡಬೇಕು. ಸಂಬಂಧಗಳ ಬಗ್ಗೆ ತಿಳಿಸಿಕೊಡ ಬೇಕು. ಅದರಿಂದ ನಾವು ನಮ್ಮವರು ಎಂಬ ಭಾವನೆಗಳು ಮೂಡುವವು.


             ನನ್ನ ಅಭಿಪ್ರಾಯದಲ್ಲಿ ಮಕ್ಕಳಿಗೆ ಹೆಚ್ಚು ಹೊರಾಂಗಣ ಆಟವನ್ನು ಆಡಲು ಪ್ರೇರೇಪಿಸಬೇಕು. ಮಕ್ಕಳ ಜೊತೆ ನಾವು ಆಟವಾಡುವುದರಿಂದ ಮಕ್ಕಳಲ್ಲಿ ಮಾನಸಿಕವಾಗಿ ದೈಹಿಕವಾಗಿ ಆರೋಗ್ಯವಾಗಿರಲು ಕಾರಣವಾಗುತ್ತದೆ. ಈಜು, ಗಾಳಿ ಪಟ ಹಾರಿಸೋದು ಹೀಗೆ ಹಲವಾರು ಆಟಗಳಿವೆ. ಹಿಂದೆ ನಾವು ಗಾಳಿಪಟ ಹಾರಿಸುವಾಗ ಅದೆಷ್ಟು ಸಂತೋಷ ವೆನಿಸುತ್ತಿತ್ತು ?! ಈಗಿನ ಮಕ್ಕಳಿಗೆ ಅದರ ಖುಷಿ ಸಿಗುತ್ತಿಲ್ಲ ಬರಿ ಓದು ಓದು ಓದು ಅಷ್ಟೇ... ಇಂತಹ ಸಣ್ಣ ಪುಟ್ಟ ಆಟಗಳು ಮಕ್ಕಳಿಗಷ್ಟೇ ಅಲ್ಲದೆ ನಮಗೂ ಕೂಡ ಖುಷಿ ನೀಡುತ್ತವೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತವೆ.

ಇಂದು ಭಾನುವಾರ ನಮ್ಮ ಸ್ನೆಹಿತರ ಜೊತೆ ಸೆರಿ ಮಕ್ಕಳನ್ನು ಹೊರಗಡೆ ಸುತ್ತಾಡಿಸಿಕೊಂಡು ಬಂದೆ ಅವರಿಗಾದ ಆನಂದ ಖುಷಿಕಂಡು ನನಗೂ ಸಂತೋಷವಯಿತು...

ಬಸವರಾಜ ಭೂತಿ,  ಶಿಕ್ಷಕರು

No comments:

Post a Comment

School Photos

 

ಬರದ ಬರೆ

  ಮೊನ್ನೆ ಶನಿವಾರ ಅರ್ಧ ದಿನದ ಶಾಲೆ ಮುಗಿಸಿ,  ಬಸ್ಸತ್ತಿ  ಊರ ಕಡೆಗೆ ಹೊರಟೆ. ನನ್ನೂರಿಗೆ ಹೋಗದೆಯು ತುಂಬಾ ದಿನಗಳಾಗಿತ್ತು. ಹೋಗುವ ದಾರಿ ಮಧ್ಯ ಮಧ್ಯದಲ್ಲಿ ಅಲ್ಲಲ್ಲಿ ಬ...