ಯಾದಗಿರಿಯ ಬೆಟ್ಟದ ಮೇಲೆ...!
ನಮ್ಮ ಕಾರುಗಳನ್ನು ಒಂದು ಕಡೆ ನಿಲ್ಲಿಸಿ, ಒಬ್ಬೊಬ್ಬರು ಕೈಯಲ್ಲಿ ಒಂದೊಂದು ನೀರಿನ ಬಾಟಲಿ
ಹಿಡಿದು, ಉತ್ತರ ದಿಕ್ಕಿನ ಕಡೆಗೆ ಮುಖ ಮಾಡಿರುವ ಮುಖ್ಯದ್ವಾರ ಹಿಡಿದು ಕೋಟೆ ಹತ್ತುವುದಕ್ಕೆ
ಶುರುಮಾಡಿದೆವು. ಕೋಟೆಯ ಜಾಗ ಆಕ್ರಮಿಸಿಕೊಂಡು ಜನರು ಅಲ್ಲಿಲ್ಲಿ ಕೋಟೆಯ
ಸುತ್ತಾ ಮನೆ ಮಾಡಿಕೊಂಡು ವಾಸಿಸುತ್ತಿದ್ದರು. ಈ ಪುರಾತನವಾದ ಕೋಟೆ ಅಲ್ಲಿ ಇಲ್ಲಿ ಮುರಿದು
ಬಿದ್ದು,
ಗಿಡಗಂಟಿಗಳು ಬೆಳೆದು ಯಾವುದೇ ಸ್ವಚ್ಛತೆ ಇಲ್ಲದೆ ಹಾಳಾಗಿದ್ದು ಕಂಡು
ಇದಕ್ಕೆ ಸರ್ಕಾರದ ರಕ್ಷಣೆಗಾಗಿ ಕಾಯುತ್ತಿದೆಯೆನೋ ಅನಿಸಿತು.
ಕೋಟೆ ಹತ್ತಿ ಹೋಗುವಾಗ ಮೊದಲಿಗೆ
ದರ್ಶನವಾಗಿದ್ದು 22, 23, 24, ನೇ ತೀರ್ಥಂಕರ ಜೈನ ಬಸದಿಗಳಗಳು. ಅಲ್ಲಿಂದ ಸ್ವಲ್ಪ ಮುಂದೆ ಸಾಗಿದಾಗ
ಭುವನೇಶ್ವರಿ ದೇವಿ ಮಂದಿರವಿದೆ. ಎತ್ತರ ಕಡಿದಾದ ಬಂಡೆಯಲ್ಲಿ ನೆಲೆಸಿರುವ ದೇವಿಯ ದರ್ಶನ
ವಿಜಯದಶಮಿಯ ಮೊದಲನೇ ದಿನದಂದು ಆಗಿದ್ದು, ಪೂರ್ವ ಯೋಜಿತವಾಗಿರದ ನಮ್ಮೆಲ್ಲರ ಮನಸ್ಸಿಗೆ ಖುಷಿ
ತಂದಿತ್ತು. ಅರ್ಚಕರು ನೀಡಿದ ಮಂಗಳಾರತಿ ಪಡೆದು, ಮನಸಾರೆ ದೇವಿಯನ್ನು
ಕಣ್ತುಂಬಿಕೊಂಡೆವು. ಉದ್ಭವ ಮೂರ್ತಿಯಾದ ದೇವಿಯು
ಜೈನ ತೀರ್ಥಂಕರರು ತಪಸ್ಸು ಮಾಡುವಾಗ, ರಾಕ್ಷಸರು ಬಂದು ಜೈನ ತೀರ್ಥಂಕರರ ತಪಸ್ಸು ಭಂಗ ಮಾಡುತ್ತಿದ್ದರಂತೆ, ಜೈನ ತೀರ್ಥಂಕರರ ತಪಸ್ಸು ಭಂಗವಾಗಬಾರದೆಂದು, ತಾಯಿ ಭುವನೇಶ್ವರಿ ದೇವಿಯು ಜೈನ ತೀರ್ಥಂಕರರನ್ನು ತನ್ನ ಹಣೆಯ ಮೇಲಿರಿಸಿಕೊಂಡು,
ರಾಕ್ಷಸರನ್ನು ಸೆದೆ ಬಡಿದಿದ್ದಳಂತೆ. ದೇವಿಯ ಮಹೀಮೆಯ ಕೂರಿತು ಹೇಳುತ್ತಾ
ಉದ್ಭವ ಮೂರ್ತಿಯಾದ ಭುವನೇಶ್ವರಿ ದೇವಿಯ ಹಣೆಯ ಮೇಲಿನ ಕಿರೀಟವನ್ನು ತೆಗೆದು,
ತಾಯಿಯ ಹಣೆಯ ಮೇಲೆ ತಪಸ್ಸು ಮಾಡುತ್ತ ಕುಳಿತ ಜೈನ ತೀರ್ಥಂಕರನ್ನು
ತೋರಿಸುತ್ತಾ ಅರ್ಚಕರು ಇತಿಹಾಸ ಹೇಳಿದರು. ತಿನ್ನಲು ಒಂದೊಂದು ಬಾಳೆಹಣ್ಣಿನ ಪ್ರಸಾದವನ್ನು ಕೊಟ್ಟರು. ಸ್ವಲ್ಪ
ಹೊತ್ತು ಅಲ್ಲಿಯೆ ಕುಳಿತು ವಿಶ್ರಾಂತಿ ಪಡೆದು. ಕೋಟೆ ವೀಕ್ಷಿಸಲು ಹೊರಟೆವು.
ಭುವನೇಶ್ವರಿ ದೇವಿ ದರ್ಶನ
ದಕ್ಷಿಣ ಭಾರತದ ಯಾದವರು,
ಯಾದಗಿರಿಯನ್ನು ತಮ್ ರಾಜ್ಯದ ರಾಜಧಾನಿಯನ್ನಾಗಿ ಆಯ್ಕೆ ಮಾಡಿ,
ಆಳ್ವಿಕೆ ಮಾಡಿದರು. ಕ್ರಿ.ಶ1347 ರಿಂದ 1425 ವರೆಗೂ ಯಾದಗಿರಿಯನ್ನು ಪ್ರಾಚೀನ ಶಾಸನಗಳಲ್ಲಿ ಉಲ್ಲೇಖಿಸಲಾಗಿದೆಯಂತೆ.
ಯಾದಗಿರಿ ಜಿಲ್ಲೆಯ ಇತಿಹಾಸ ಬಹಳಷ್ಟು ರೋಚಕವಾಗಿದೆ. ಶಾತವಾಹನರು,
ಬಾದಾಮಿಯ ಚಾಲುಕ್ಯರು, ರಾಷ್ಟ್ರಕೂಟ, ಶಾಹಿಸ್, ಆದಿಲ್ ಶಾ, ನಿಜಾಮ್ ,ದಕ್ಷಿಣದ ಪ್ರಸಿದ್ಧ ರಾಜವಂಶಗಳು ಜಿಲ್ಲೆಯನ್ನು ಆಳಿಹೊಗಿವೆ ಎನ್ನುವದು
ಇತಿಹಾಸ ಮೆಲಕು ಹಾಕುತ್ತಾ ಎತ್ತರದ ಬೆಟ್ಟದ ಮೇಲೆ ಹತ್ತಿದೆವು.
ಬೆಟ್ಟದ ತುದಿಯಲ್ಲಿರುವ ತೋಪು
ಬೆಟ್ಟದ ತುದಿಯ ಮೇಲೆ ಅಬ್ಬರಿಸಿ, ಬಿಬ್ಬಿರಿದ ತೊಪು ಇಂದು ಸ್ತಬ್ದವಾಗಿ ಮಲಗಿತ್ತು. ಅದು
ಮುಟ್ಟಿ ನೋಡಿ ಖುಷಿಪಟ್ಟು ಅದರ ಮುಂದೆ ನಿಂತು ಪೋಟೋ ಕ್ಲಿಕ್ಕಿಸಿಕೋಡು ಯಾದಗಿರಿಯ ವಿಹಂಗಮ ನೋಟ
ನೋಡುತ್ತಿರುವಾಗ,
ಕಲ್ಲುಬಂಡಯ
ಕಿರು ಜಾಗದಲ್ಲಿ ಹಸು ಮೆಯುತ್ತಿರುವುದು ಕಾಣಿಸಿತು. ನಮ್ಮಲ್ಲಿ ಯಾರೊಬ್ಬರೂ ಸ್ನೇಹಿತರು,
ಆಕಡೆ ಕೈ ಮಾಡಿ ತೋರಿ
" ಅಲ್ಲಿ ನೋಡಿ...! ಆಕಳ ಕರು ಎಲ್ಲಿ ಹೋಗಿ ಮೇಯುತ್ತಿದೆ" ಎಂದು
ಹೇಳುತ್ತಿದ್ದಂತೆ, ನಾವೆಲ್ಲರೂ ಆ ಕಡೆ ತಿರುಗಿ ನೋಡುತ್ತಾ. ಒಬ್ಬೊಬ್ಬರು ಒಂದೊಂದು ರೀತಿಯಾಗಿ
ಯೋಚಿಸತೊಡಗಿದೆವು. ನಮ್ಮಲ್ಲೊಬ್ಬ ಸ್ನೇಹಿತರು -
" ಅಲ್ಲಿ ತುಂಬಾ ಹಸಿರು ಬೆಳೆದಿದೆ ತಿನ್ನಲು ಹೋಗಿರಬಹುದು" ಎಂದರು. ನಾವೆಲ್ಲರೂ
ಹಾಗೆ ಇರಬಹುದೇನೋ ಎಂದುಕೊಂಡು ಸುಮ್ಮನಾಗಿ ಬೆಟ್ಟದ ಮೇಲಿಂದ ಯಾದಗಿರಿಯ ಸುಂದರ ದೃಶ್ಯವನ್ನು
ವೀಕ್ಷಿಸುತ್ತಾ, ಮೊಬೈಲ್ ಕ್ಯಾಮೆರಾದ ಕಣ್ಣಿಗೆ ಮೈಯೊಡ್ಡಿ
ನಿಂತು ತೃಪ್ತಿಯಾಗುವಷ್ಟು ಫೋಟೋ ತೆಗೆಸಿಕೊಂಡೆವು, ಬೆಟ್ಟದ ಮೇಲಿಂದ ವಿಹಂಗಮ ನೋಟ ವೀಕ್ಷಿಸುತ್ತಿದ್ದರೆ. ಕೆಳಗಿಳಿದು
ಬರಲು ಮನಸೇ ಆಗುತ್ತಿರಲಿಲ್ಲ, ಇನ್ನು ಬೆಟ್ಟ ಸುತ್ತುವದು ತುಂಬಾ ಇದೆ ಎಂದು ಕೊಂಡು. ಅಲ್ಲಿಂದ ಕಾಲ್ಕಿತ್ತಿ, ಪಕ್ಕದಲ್ಲಿದ್ದ ಅಕ್ಕ ತಂಗಿಯರ ಬಾವಿ ನೋಡಲು, ಆಕಳ ಕರು ಕಾಣಿಸಿದ ಎತ್ತರದ ಕಲ್ಲು ಬಂಡೆಯ ಪ್ರದೇಶದ ಕಡೆಗೆ
ಹೊರಟೆವು. ಅಲ್ಲೇ ಪಕ್ಕದಲ್ಲಿದ್ದ ಒಂದು ಸುಂದರ
ದೃಶ್ಯವನ್ನು ಸೆರೆಹಿಡಿಯಲು ನಾನು ಮತ್ತು ಇನ್ನೋರ್ವ ಸ್ನೇಹಿತರು ಬೇರೊಂದು ಕಡೆಗೆ ಹೋಗುವಾಗ,
ನಮಗಿಂತಲೂ ಸ್ವಲ್ಪ ಮುಂದೆ ಹೋಗಿದ್ದ ಶ್ರೀ ಶಂಭುಲಿಂಗ ಪಾಟೀಲ ಸರ್
ಕರುವಿನ ಸ್ಥಿತಿ ಕಂಡು ಮರುಗಿ, ಒಂದೇ ಸವನೆ ನಮ್ಮೆಲ್ಲರನ್ನೂ ಜೋರಾಗಿ ಕೂಗಿ ಕರೆಯತೊಡಗಿದರು. ಏನಾಯಿತು
ಎಂದು,
ನಾವೆಲ್ಲರೂ ಓಡಿ ಬಂದು ನೋಡುವಷ್ಟರಲ್ಲಿ. ಆಕಳು ಕರುವೊಂದು ತುಂಬಾ
ಅಪಾಯದಲ್ಲಿ ಸಿಕ್ಕಿಹಾಕಿಕೊಂಡು ಮೇಲೆ ಬರಲಾಗದೆ, ಅಸಹಾಯಕತೆಯಿಂದ ರಕ್ಷಣೆಗಾಗಿ ಗೋಗೊರೆಯುತ್ತಿರುವುದು ಕಣ್ಣಿಗೆ ಬಿತ್ತು.
ಅಪಾಯದಿಂದ ಪಾರಾದ ಹಸು
ವಾರದಿಂದ ಅಲ್ಲೇ ಸಿಕ್ಕಾಕಿಕೊಂಡು ಪರದಾಡುತ್ತಿದ್ದ ಕರು. ಅಲ್ಲಿಯೇ ಬೆಳೆದ ಹುಲ್ಲು ಮತ್ತು ಮಳೆಯಾಗಿ ಬಸಿಯುತ್ತಿದ್ದ ನೀರು ಕುಡಿದು ಬದುಕಿತ್ತು. ಅದರ ಸ್ಥಿತಿ ಕಂಡು ಎಲ್ಲರಿಗೂ ಮರುಕ ಉಂಟಾಗಿ. ಅದರ ರಕ್ಷಣೆಗೆ ನಿಂತೆವು. ಕಲ್ಲು ಬಂಡೆಯಾದ್ದರಿಂದ ಅದನ್ನು ಕಾಪಾಡುವುದು ಸುಲುಭವಾಗಿರ್ಲಿಲ್ಲ. ಹೆಚ್ಚು ಕಡಿಮೆಯಾದರೆ ನಾವು ಪ್ರಪಾತಕ್ಕೆ ಜಾರಿ ಬೀಳುವ ಅಪಯವಿತ್ತು. ಎಲ್ಲರೂ ಬೇಡವೆಂದ್ರು ಕೇಳದೆ ಆ ಕರುವಿನ ಕೊರಳಲ್ಲಿದ್ದ ಹಗ್ಗ ಹಿಡಿದು ಮೇಲೆತ್ತಲು ಮೇಲೆತ್ತಲು ಸ್ವಲ್ಪ ಧೈರ್ಯ ಮಾಡಿ ಕೆಳಗಿಳಿದು ದುಷ್ಸಾಹಾಸ ಮಾಡಿ, ನಿಜವಾಗ್ಲೂ ಅಪಾಯ ತಂದುಕೊಂಡಿದ್ದೆ. ಸಾಹಸ ಮಾಡಿ ಇಳಿಯುತ್ತಿದ್ದಾಗ, ಆ ಕರು ಒಮ್ಮೆಲೆ ನನ್ನನ್ನು ಹಾಯ್ಲು ಬಂದಿದ್ದೆ ಬೆದರಿ ಸುಮ್ಮನೆ ನಿಂತಿತು. ಅಲ್ಲಿ ನಿಲ್ಲಲಷ್ಟೆ ಜಾಗವಿತ್ತು. ಆ ಕರು ಬೆದರಿ ನನಗೆ ಗುದ್ದಿದ್ದರೆ. ಆಳವಾದ ಪ್ರಪಾತಕ್ಕೆ ಬೀಳುತ್ತಿದ್ದೇನೂ, ಮೃತ್ಯು ದೇವತೆ ಒಮ್ಮೆ ನನ್ನ ಕಣ್ಮುಂದೆ ಸುಳಿದು ಹೋದಳು. ಆ ತಾಯಿಯ ಆಶೀರ್ವಾದವೇನೋ ನಾನು ಅಪಾಯದಿಂದ ಪಾರಾದೇ. ಇದು ಸುರಕ್ಷಿತವಲ್ಲವೆಂದು ಎಲ್ಲಾ ಸ್ನೇಹಿತರು ನನ್ನ ಕೈ ಹಿಡಿದು ಮೇಲೇಳೆದರು. ಮೇಲೆ ಬಂದು ಒಂದು ನಾನು ನಿಟ್ಟುಸಿರುಬಿಟ್ಟೆ.
ಅದೇ ಸಮಯಕ್ಕೆ ಕೂಗುತ್ತಾ ಚೀರುತ್ತ
ಹತ್ತಾರು ಮಕ್ಕಳ ಗೂಪೊಂದು ಕೋಟೆ ವೀಕ್ಷಿಸಲು ಅಲ್ಲಿಗೆ ಬಂತು. ನಾವು ಆ ಮಕ್ಕಳನ್ನು ಕೂಗಿ ಕರೆದೇವು, ಅವರು ನಮ್ಮ ಜೊತೆ ಕೈಜೋಡಿಸಿದರು. ನಾವೆಲ್ಲರೂ
ಸೇರಿ ಪ್ರಯತ್ನಿಸಿದರು ಆ ಕರು
ಮೇಲೆತ್ತಲಾಗಲಿಲ್ಲ. ನಾವು ಕೆಳಗೆ ಹೋಗಿ ಸಂಬಂಧಪಟ್ಟ ಯಾರಿಗಾದರೂ ತಿಳಿಸಿದರಾಯಿತು ಎಂದು ಯೋಚಿಸಿ.
ಮಕ್ಕಳಿಗೆ ಅನಾವಶ್ಯಕ ಅಪಾಯ ತಂದು ಕೊಳ್ಳಲು ಬೆಡ್ರಿ ಎಂದು ಹೇಳಿ,
ನಾವು ಮತ್ತೆ ಬೆಟ್ಟ ವೀಕ್ಷಣೆಯಲ್ಲಿ ತೊಡಗಿದೆವು. ನಾವು ಬಿಟ್ಟರು
ಚಿಕ್ಕ ಮಕ್ಕಳು ಪ್ರಯತ್ನ ಬಿಡಲಿಲ್ಲ.
ಮದ್ದು ಗುಂಡುಗಳ ಸಂಗ್ರಹದ ಬಾವಿ
ಕೋಟಿಯ ಮೇಲಿರುವ ಬೃಹತ ತೋಪಿನ
ಬುರುಜು,
ಶ್ರೀರಾಮ ಲಕ್ಷ್ಮಣ ಹನುಮಾನ್ ಉಬ್ಬು ಶಿಲಾಮೂರ್ತಿಗಳನ್ನೂ
ವೀಕ್ಷಿಸುತ್ತಾ. ಮದ್ದು ಗುಂಡುಗಳ ಸಂಗ್ರಹ ಶಿಲಾ ಬಾವಿಯನ್ನು ನೋಡಿ,
ಜೋಳದ ಹಗೆಯ ವಿಶೇಷವನ್ನು ಕಂಡು. ಶ್ರೀ ರಾಮಲಿಂಗೇಶ್ವರ ದೇವಸ್ಥಾನ
ಹಾಗೂ ತೀರ್ಥ ಕಡೆಗೆ ಪಾದ ಬೆಳೆಸಿದೇವು. ಶ್ರೀ ರಾಮಲಿಂಗೇಶ್ವರ ದರ್ಶನ ಪಡೆದು,
ದೇವಸ್ಥಾನದ ಒಳಗಡೆ ದೇವರಿಗೆ ಅರ್ಪಿಸಿಟ್ಟ ತೆಂಗಿನ ಹೊಳಕು ತಂದು
ಒಡೆದುಕೊಂಡು ತಿನ್ನುತ್ತ ಅಲ್ಲಿಯೆ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದೆವು.
ಆ ಮಕ್ಕಳನ್ನು ಕೂಗಿ ನಮ್ಮ ಬಳಿ
ಕರೆದೇವು. ಮಕ್ಕಳು ಓಡೋಡಿ ಬಂದರು. ನಾವೆಲ್ಲಾ ಸ್ನೇಹಿತರು ಸೇರಿ ಆ ಮಕ್ಕಳಿಗೆ ಪ್ರಶ್ನೆಗಳ ಮೇಲೆ
ಪ್ರಶ್ನೆ ಕೇಳಿದೆವು. "ಆಕಳು ಕರುವನ್ನು ಹೇಗೆ ಕಾಪಾಡಿದಿರಿ ತುಂಬಾ ಅಪಾಯ ಇತ್ತಲ್ಲ"
ಎಂದು ಕೇಳಿದಾಗ. ಒಬ್ಬ ಬಾಲಕ “ಸರ್ ನೀವು ಬಿಟ್ಟು ಬಂದಿರಿ, ಆ ನಾವು ಅದನ್ನು ಕಾಪಾಡಲು ಏನಾದರೂ ಸಿಗಬಹುದೇನೋ ಎಂದು ಹುಡುಕುವಾಗ,
ಒಂದು ಉದ್ದನೆಯ ಕೊಕ್ಕೆ ಕಟ್ಟಿಗೆ ಹಾಗೂ ಒಂದು ಹಗ್ಗದ ತುಂಡು ಸಿಕ್ತು,
ಆ ಕೊಕ್ಕೆಯ ಕಟ್ಟಿಗೆ ಸಹಾಯದಿಂದ, ಆಕಳ ಕರುವಿನ ಕೊರಳಲ್ಲಿದ್ದ ಹಗ್ಗದಲ್ಲಿ ಸೇರಿಸಿ ಹಿಡಿದೇಳೆದು ಗಟ್ಟಿಯಾಗಿ
ಕಟ್ಟಿ ಎಳೆದೇವು ಸರ್, ಇನ್ನೊಂದಿಷ್ಟು ನಮ್ಮ ಸ್ನೇಹಿತರು, ಉದ್ದನೆಯ ಕಟ್ಟಿಗೆಯಿಂದ ಅದಕ್ಕೆ ತಿವಿಯ ತೊಡಗಿದರು. ಅದು ಬೆದರಿ ಒಂದೇ
ನೆಗೆತದಲ್ಲಿ ಮೇಲೆ ಬಂತು ಸರ್” ಎಂದು ಹೇಳಿದರು. ಆ ಸಮಯದಲ್ಲಿ ನಿಮ್ಮ ಕಾಲು ಜರಿದು ನೀವು ಕೆಳಗೆ ಬಿದ್ದಿದ್ದರೆ. ನಿಮ್ಮ ಗತಿ ಏನಾಗುತ್ತಿತ್ತು ಎಂದು
ಕೇಳುತ್ತಿದ್ದಂತೆ, ಮತ್ತೊಬ್ಬಬಾಲಕ ನಮಗೇನಾದರೂ ಆದರೂ ಪರವಾಗಿಲ್ಲ ಸರ್ ಅದು ಮೂಕಪ್ರಾಣಿ ಎಷ್ಟು ದಿನದಿಂದ ಅದು
ನೋವು ಅನುಭವಿಸಿತ್ತೋ ಏನೋ, ಅದು ನೋಡಿ ಹಾಗೆ ಬಿಟ್ಟು ಹೋಗಲು ಮನಸ್ಸು
ಬರಲಿಲ್ಲ ಎಂದು ಕನಿಕರ ಪಟ್ಟನು. ಮಕ್ಕಳ ಜಾಣ್ಮೆ ಮತ್ತು ಸಮಯಪ್ರಜ್ಞೆ ತುಂಬಾ ಖುಷಿಯಾಯಿತು ನೀವೆಲ್ಲಾ
ಎಲ್ಲಿ ಓದುತ್ತಿದ್ದೀರಿ ಎಂದು ಕೇಳಿದಾಗ. ಆ ಮಕ್ಕಳು ನಾವು ಸರ್ಕಾರಿ ಶಾಲೆ ಕೋಳಿವಾಡದಲ್ಲಿ
ಓದುತ್ತಿದ್ದೇವೆ ಸರ್, ಎಂದು ಹೇಳಿದರು.
ಹಸು ರಕ್ಷಣೆ ಮಾಡಿದ ವೀರ ಬಾಲಕರು
ಅವರ ಸಾಹಸಕ್ಕೆ ಮೆಚ್ಚಿ ಅವರ ಸಾಹಸಕ್ಕೆ ಮೆಚ್ಚಿ ನಾವು. ನಾವು ಮಕ್ಕಳಿಗೆ ಏನಾದ್ರು ತಿನ್ನಿರಿಯಂದು ಒಂದು ನೂರು ರೂಪಾಯಿ ಬಹುಮಾನವನ್ನು ಕೊಟ್ಟು. ಅವರ ಜೊತೆ ನಿಂತು ಒಂದು ಫೋಟೋ ಕ್ಲಿಕ್ಕಿಸಿ ಒಂದು ಚಿಕ್ಕ ವಿಡಿಯೋವನ್ನು ಮಾಡಿಕೊಂಡೇವು. ಸರ್ಕಾರದಿಂದ ಶೌರ್ಯ ಪ್ರಶಸ್ತಿ ಸಿಗುವುದಾದರೆ ಇಂಥ ಮಕ್ಕಳಿಗೆ ಸಿಗಬೇಕು ಎಂದು ಮಾತನಾಡುತ್ತ. ಆ ಬೆಟ್ಟ ಕೆಳಗಿಳಿದು ಬಂದೆವು.
ಈ ಕೆಳಗಿನ ವೀಡಿಯೋ ವೀಕ್ಷಿಸಿ.👇
ಹಸು ರಕ್ಷಣೆ ಮಾಡಿದ ಬಾಲಕರೊಂದಿಗೆ ಸಂದರ್ಶನ
ಬೆಟ್ಟದಲ್ಲಿ ಸುತ್ತಾಡಿ ಸುಸ್ತಾಗಿದ್ದ ನಮಗೆ ಬಹಳಷ್ಟು ಹಸಿವಾಗಿತ್ತು. ಐಬಿಯಲ್ಲಿ ಮೊದಲೇ ಆರ್ಡರ್ ಮಾಡಲಾಗಿದ್ದ ಊಟವನ್ನು ಪಾರ್ಸಲ್ ತರಲು ಪಾಟೀಲ ಸರ್ ಯಾರೋ ಇಬ್ಬರಿಗೆ ಕಾಲ್ ಮಾಡಿ ಹತ್ತಿಕುಣಿ ಡ್ಯಾಮಿಗೆ ಬರಲು ಹೇಳಿದರು. ಆಕಳ ಕರು, ಮಕ್ಕಳು ಹೀಗೆ ಎನೇನೋ ಮಾತಾಡುತ್ತಾ, ನಾವೇ ಏನೋ ಸಾಧನೆ ಮಾಡಿದಂತೆ ಬೀಗುತ್ತಾ, ಹತ್ತಿಕುಣಿ ಡ್ಯಾಮ ಕಡೆಗೆ ಹೊರಟೆವು.
ಸೌದಾಗಾರ ಸೌದಾಗರ ಜಲಾಶಯದಲ್ಲಿ ಊಟಕ್ಕೆ
ಜಲಾಶಯ ಕಣ್ತುಂಬಿಕೋಳ್ಳುತ್ತಿರುವಾಗಲೆ ಊಟವು ಅಲ್ಲಿಗೆ ಬಂತು. ಅಲ್ಲಿ ತುಂಬಾ ಜನ ಇರುವುದರಿಂದ ಇಲ್ಲಿ ಊಟ ಮಾಡುವುದು ಸರಿಯಲ್ಲ ಎಂದು ತಿಳಿದು ಸೌಡಾಗರ ಜಲಾಶಯದ ಕಡೆಗೆ ಹೊರಟೆವು. ಸೌದಾಗರ ಜಲಾಶಯದ ಹತ್ತಿರ ಒಂದು ಎತ್ತರವಾದ ಸ್ಥಳದಲ್ಲಿದ್ದ ದರ್ಗಾ ಹತ್ತಿರ ಕುಳಿತು ಎಲ್ಲರೂ ಊಟ ಮಾಡಿ. ಸ್ವಲ್ಪ ಸಮಯ ಅಲ್ಲೆ ಕಳೆದು. ಊರ ಕಡೆಗೆ ಹೊರಟೆವು. ಚಿತಾಪುರ ಮಾರ್ಗ ಮಧ್ಯ ಕರ್ನಾಟಕದಲ್ಲೆ ಪ್ರಸಿದ್ಧವಾದ ಯಾದಗಿರಿಯ ಸೀತಾಫಲ ಹತ್ತಿಕುಣಿ ಪರ್ವತದಲ್ಲಿ. ರಸ್ತೆಬದಿಗೆ ಕುಳಿತು ಮಾರುತ್ತಿದ್ದರು. ಒಂದಿಷ್ಟು ದುಡ್ಡು ಕೊಟ್ಟು ಒಂದು ಚೀಲ ಸೀತಾಫಲ ತೆಗೆದುಕೊಂಡು ಮತ್ತೆ ಶಹಾಪುರ ಕಡೆಗೆ ಪ್ರಯಾಣ ಬೆಳೆಸಿದೆವು.
---------------------------------------
ಹವ್ಯಾಸಿ ಬರಹಗಾರರು:- ಬಸವರಾಜ ಭೂತಿ, ಶಿಕ್ಷಕರು
ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಬೇವಿನಹಳ್ಳಿ ಕ್ರಾಸ್ ಶಹಾಪುರ.
ಮೋ. ನಂಬರ: 9900804567
ನಿಮ್ಮ ಲೇಖನ ಅದ್ಭುತವಾಗಿದೆ, ಮುಂದುವರೆಸಿ ಬರವಣಿಗೆಯನ್ನು.ಧನ್ಯವಾದಗಳು.
ReplyDeleteSuper sir you are creative parson
ReplyDelete